ಈ ತರಕಾರಿ ಸಿಪ್ಪೆಯಿಂದ ಕಪ್ಪಗಾಗುತ್ತೆ ಬಿಳಿ ಕೂದಲು….!

ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು, ಉದುರುವುದು ಇತ್ತೀಚಿನ ದಿನಗಳಲ್ಲಿ ಕಾಮನ್‌ ಆಗಿಬಿಟ್ಟಿದೆ. ಬಿಳಿ ಕೂದಲು ಮೂಡಿದ ತಕ್ಷಣ ಕೆಮಿಕಲ್‌ ಯುಕ್ತ ಕಪ್ಪು ಬಣ್ಣವನ್ನು ಹಚ್ಚಬೇಡಿ. ಅದರ ಬದಲು ಕೆಲವೊಂದು ನೈಸರ್ಗಿಕ ಮನೆ ಮದ್ದುಗಳನ್ನು ಮಾಡಿ ನೋಡಿ. ಇದರಿಂದ ಸಹಜವಾಗಿಯೇ ನಿಮ್ಮ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಆಲೂಗಡ್ಡೆ ಸಿಪ್ಪೆ ಬಿಳಿ ಕೂದಲನ್ನು ಕಪ್ಪಗೆ ಮಾಡಬಲ್ಲದು. ಆಲೂಗಡ್ಡೆ ಮತ್ತು ಅದರ ಸಿಪ್ಪೆಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ. ವಿಟಮಿನ್ ಬಿ ಮತ್ತು ವಿಟಮಿನ್ ಸಿ, ವಿಟಮಿನ್ ಬಿ-6, ರಂಜಕ, ಮೆಗ್ನೀಸಿಯಮ್ ಮತ್ತು ಫೋಲೇಟ್ ಇದರಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡುಬರುತ್ತದೆ.

ಆಲೂಗಡ್ಡೆ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಕುದಿಸಿ. 10 ನಿಮಿಷಗಳ ಕಾಲ ಕುದಿಸಿದ ನಂತರ, ಈ ನೀರನ್ನು ಸಂಪೂರ್ಣವಾಗಿ ತಣ್ಣಗಾಗಿಸಿ. ಈ ನೀರನ್ನು ಜಾರ್ ನಲ್ಲಿ ಮುಚ್ಚಿಡಿ. ಬಳಿಕ ಆಲೂಗೆಡ್ಡೆ ಸಿಪ್ಪೆಯಿಂದ ತಯಾರಿಸಿದ ಈ ನೀರನ್ನು ನಿಮ್ಮ ಕೂದಲಿಗೆ ನಿಧಾನವಾಗಿ 5 ನಿಮಿಷಗಳ ಕಾಲ ಮಸಾಜ್‌ ಮಾಡಿ. 30 ನಿಮಿಷಗಳ ಕಾಲ ಅದನ್ನು ಹಾಗೆಯೇ ಆರಲು ಬಿಡಿ.  ನಂತರ ತಣ್ಣಗಿನ ನೀರಿನಿಂದ ತಲೆ ತೊಳೆದುಕೊಳ್ಳಿ. ಈ ರೀತಿ ನಿಯಮಿತವಾಗಿ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read