ಯಾವ ಉಪ್ಪು ಆರೋಗ್ಯಕ್ಕೆ ಉತ್ತಮ ? ಅಧಿಕ ʼಬಿಪಿʼ ನಿಯಂತ್ರಣಕ್ಕೂ ಇದೇ ಬೆಸ್ಟ್‌…!

ಅಧಿಕ ರಕ್ತದೊತ್ತಡ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕೋಟಿಗಟ್ಟಲೆ ಜನರ ಮೇಲೆ ಪರಿಣಾಮ ಬೀರುತ್ತಿದೆ. ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ಕಾಯಿಲೆಯಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹಾಗಾಗಿ ಜೀವನಶೈಲಿಯಲ್ಲಿ ಬದಲಾವಣೆ, ವಿಶೇಷವಾಗಿ ಆಹಾರದಲ್ಲಿ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಯಾವ ಉಪ್ಪು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ನೋಡೋಣ.

ಎಲ್ಲಾ ರೀತಿಯ ಉಪ್ಪಿನಲ್ಲೂ ಸೋಡಿಯಂ ಕ್ಲೋರೈಡ್ ಇರುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುವ ಅಂಶವಾಗಿದೆ. ​​ವಯಸ್ಕರು ದಿನಕ್ಕೆ 2,300 ಮಿಲಿಗ್ರಾಂಗಿಂತ ಕಡಿಮೆ ಸೋಡಿಯಂ ಅನ್ನು ಸೇವನೆ ಮಾಡಬೇಕು. ಅಧಿಕ ರಕ್ತದೊತ್ತಡ ಹೊಂದಿರುವವರು ದಿನಕ್ಕೆ 1,500 ಮಿಲಿಗ್ರಾಂಗಿಂತ ಕಡಿಮೆ ಉಪ್ಪು ಸೇವನೆ ಮಾಡುವುದು ಉತ್ತಮ.

ಅಧಿಕ ರಕ್ತದೊತ್ತಡ ರೋಗಿಗಳಿಗೆ ಯಾವು ಉಪ್ಪು ಬೆಸ್ಟ್‌?

ಸಮುದ್ರ ಉಪ್ಪು : ಸೀ ಸಾಲ್ಟ್‌, ಟೇಬಲ್ ಸಾಲ್ಟ್‌ಗಿಂತ ಆರೋಗ್ಯಕರ. ಏಕೆಂದರೆ ಇದು ಕಡಿಮೆ ಖನಿಜಗಳನ್ನು ಹೊಂದಿರುತ್ತದೆ. ಆದಾಗ್ಯೂ ಸೋಡಿಯಂನ ಪ್ರಮಾಣವು ಎರಡರಲ್ಲೂ ಬಹುತೇಕ ಒಂದೇ ಆಗಿರುತ್ತದೆ.

ಹಿಮಾಲಯನ್ ಪಿಂಕ್‌ ಸಾಲ್ಟ್‌ : ಈ ಉಪ್ಪು ವಿಶೇಷ ಗುಲಾಬಿ ಬಣ್ಣಕ್ಕೆ ಹೆಸರುವಾಸಿಯಾಗಿದೆ. ಇದು ಸ್ವಲ್ಪ ಪ್ರಮಾಣದ ಕಬ್ಬಿಣವನ್ನು ಹೊಂದಿರುತ್ತದೆ. ಆದರೆ ಸೋಡಿಯಂ ಪ್ರಮಾಣವು ಟೇಬಲ್ ಸಾಲ್ಟ್‌ನಂತೆಯೇ ಇರುತ್ತದೆ.

ಕಲ್ಲುಪ್ಪು : ಕಲ್ಲು ಉಪ್ಪನ್ನು ಸಾಮಾನ್ಯವಾಗಿ ಆರೋಗ್ಯಕರ ಉಪ್ಪು ಎಂದು ಪರಿಗಣಿಸಲಾಗುತ್ತದೆ. ಇದು ಟೇಬಲ್ ಸಾಲ್ಟ್‌ಗಿಂತ ಕಡಿಮೆ ಸಂಸ್ಕರಿಸಲ್ಪಟ್ಟಿದೆ ಮತ್ತು ಸ್ವಲ್ಪ ಕಡಿಮೆ ಸೋಡಿಯಂ ಹೊಂದಿರಬಹುದು.

ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು ಹೇಗೆ?

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು ಮುಖ್ಯ. ಪ್ಯಾಕೇಜ್ಡ್‌ ಆಹಾರ ಮತ್ತು ಸಂಸ್ಕರಿಸಿದ ಆಹಾರ ಸೇವನೆಯನ್ನು ತಪ್ಪಿಸಿ. ಅಡುಗೆಗೆ ಕಡಿಮೆ ಉಪ್ಪು ಬಳಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read