ʼಪುಷ್ಪಾ 2ʼ ಬಿಡುಗಡೆ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಇಲ್ಲಿದೆ ಬಿಗ್‌ ಅಪ್ಡೇಟ್…!

ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಪುಷ್ಪ 2 ಸಿನಿಮಾ ನಿರ್ಮಾಪಕರು ಹೊಸ ಅಪ್ ಡೇಟ್ ಕೊಟ್ಟಿದ್ದಾರೆ.

ಪುಷ್ಪಾ 2 ಯಾವಾಗ ಬರುತ್ತೆ ಎಂಬ ಅಭಿಮಾನಿಗಳ ಕುತೂಹಲಕ್ಕೆ 20 ಸೆಕೆಂಡ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಪುಷ್ಪ ಎಲ್ಲಿ? ಎಂದು ಪ್ರಶ್ನಿಸುವ ವಿಡಿಯೊ ಬಿಡುಗಡೆ ಮಾಡಿರುವ ಚಿತ್ರ ನಿರ್ಮಾಣ ತಂಡ ಅಲ್ಲು ಅರ್ಜುನ್ ಬರ್ತ್ ಡೇಗಾಗಿ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದೆ.

ವಿಡಿಯೋದಲ್ಲಿ ತಿರುಪತಿ ಜೈಲಿನಿಂದ ಪುಷ್ಪ ತಪ್ಪಿಸಿಕೊಂಡಿದ್ದಾರೆ. ಇದೀಗ ಪುಷ್ಪ ಎಲ್ಲಿದ್ದಾರೆ ಎಂದು ಕೇಳುವ ಧ್ವನಿಯಿರುವ ವಿಡಿಯೋದಲ್ಲಿ ಖಡಕ್ ಲುಕ್ ನಲ್ಲಿ ಕಾಣುವ ಅಲ್ಲು ಅರ್ಜುನ್ ರ ಫಸ್ಟ್ ಲುಕ್ ರಿವೀಲ್ ಆಗಿದೆ.

ಅಲ್ಲು ಬರ್ತ್ ಡೇ ಗಾಗಿ ಏಪ್ರಿಲ್ 7 ರ ಸಂಜೆ 4 ಗಂಟೆ 5 ನಿಮಿಷಕ್ಕೆ ಚಿತ್ರತಂಡ ಪುಷ್ಪ 2 ಬಿಡುಗಡೆ ದಿನಾಂಕ ಘೋಷಣೆ ಮಾಡೋ ಸಾಧ್ಯತೆಯಿದೆ.

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಜನ್ಮದಿನದ ಮುನ್ನಾದಿನದಂದು ಚಿತ್ರ ತಯಾರಕರಾದ ಮೈತ್ರಿ ಮೂವೀಸ್ ಅಭಿಮಾನಿಗಳಿಗೆ ನೀಡುವ ಸಿಹಿಸುದ್ದಿ ಬಗ್ಗೆ ಭಾರೀ ಕುತೂಹಲವಿದೆ.

2021 ರಲ್ಲಿ ಪುಷ್ಪಾ ತೆರೆಗೆ ಬಂದಂದಿನಿಂದ, ಅಲ್ಲು ಅರ್ಜುನ್ ಅವರು ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಪುಷ್ಪಾ ಭಾಗ 1 ಹಿಟ್ ನಂತರ ಅದರ ಸೀಕ್ವೆಲ್ ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read