ಸ್ನೇಹಿತ ಶಿವಕುಮಾರ್ ಶರ್ಮಾ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದ ಜಾಕಿರ್‌ ಹುಸೇನ್‌; ಹಳೆ ಫೋಟೋ ಹಂಚಿಕೊಂಡು ʼಇದು ನಮ್ಮ ಭಾರತʼ ಎಂದ ನೆಟ್ಟಿಗರು

ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ ಮತ್ತು ಅಂತರಾಷ್ಟ್ರೀಯ ಮನ್ನಣೆ ಪಡೆದ ತಬಲಾ ವಿದ್ವಾನ್ ಜಾಕಿರ್ ಹುಸೇನ್ ಸೋಮವಾರ ನಿಧನರಾಗಿದ್ದು, ಅವರಿಗೆ 73 ವರ್ಷ ವಯಸ್ಸಾಗಿತ್ತು. ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ (idiopathic pulmonary fibrosis) ನಿಧನರಾದರು ಎಂದು ಜಾಕಿರ್ ಹುಸೇನ್ ಅವರ ಕುಟುಂಬ ಖಚಿತಪಡಿಸಿದೆ.

ಜಾಕಿರ್ ಹುಸೇನ್ ಅವರು ತಮ್ಮ ಅದ್ಭುತ ತಬಲಾ ವಾದನ ಕೌಶಲ್ಯಕ್ಕೂ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತವನ್ನು ವಿಶ್ವದಾದ್ಯಂತ ಪ್ರೇಕ್ಷಕರಿಗೆ ಒಂದುಗೂಡಿಸುವ ಸಾಮರ್ಥ್ಯಕ್ಕೂ ಹೆಸರುವಾಸಿಯಾಗಿದ್ದರು.

ಮೇ 2022 ರಲ್ಲಿ ಜಾಕಿರ್ ಹುಸೇನ್ ಅವರು ಒಬ್ಬ ಸಹವರ್ತಿ ಕಲಾವಿದ ಮತ್ತು ಆಪ್ತ ಸ್ನೇಹಿತರಾದ ಪಂಡಿತ್ ಶಿವಕುಮಾರ್ ಶರ್ಮಾ ಅವರ ನಿಧನದಿಂದ ವೈಯಕ್ತಿಕ ನಷ್ಟವನ್ನು ಅನುಭವಿಸಿದ್ದರು. ಪ್ರಖ್ಯಾತ ಸಂತೂರ್ ವಿದ್ವಾನ್ ಶಿವಕುಮಾರ್ ಶರ್ಮಾ ಹೃದಯಾಘಾತದಿಂದ ನಿಧನರಾದ ನಂತರ, ಜಾಕಿರ್ ಹುಸೇನ್ ಅವರ ಅಂತ್ಯಕ್ರಿಯೆಯಲ್ಲಿ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದರು.

ಆ ಸಮಯದಲ್ಲಿ ಜಾಕಿರ್ ಹುಸೇನ್ ಅವರ ದುಃಖಭರಿತ ಚಿತ್ರವು ವೈರಲ್ ಆಗಿತ್ತು. ಮಾಸ್ಕ್ ಧರಿಸಿದ್ದರೂ ಸಹ ಅವರ ದುಃಖವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿತ್ತು, ಸ್ನೇಹಿತನ ಅಂತ್ಯಕ್ರಿಯೆ ಚಿತೆ ಪಕ್ಕದಲ್ಲಿ ದುಃಖತಪ್ತರಾಗಿ ನಿಂತಿರುವ ಫೋಟೋ ಎಲ್ಲರ ಮನಕಲಕಿತ್ತು.

ಫೋಟೋಗೆ ಸಾಮಾಜಿಕ ಜಾಲತಾಣದ ಬಳಕೆದಾರರಿಂದ ಭಾವಪೂರ್ಣ ಪ್ರತಿಕ್ರಿಯೆಗಳು ಬಂದವು. “ಉಸ್ತಾದ್‌ ಜಾಕಿರ್‌ ಹುಸೇನ್ ಅವರು ತಮ್ಮ ದಶಕಗಳ ಸ್ನೇಹಿತ ಪಂಡಿತ್ ಶಿವಕುಮಾರ್ ಶರ್ಮಾ ಅವರ ಅಂತ್ಯಕ್ರಿಯೆಯಲ್ಲಿ” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರರು ಹೇಳಿದ್ದಾರೆ.

“ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವ ಒಂದು ಫೋಟೋ. ಉಸ್ತಾದ್‌ ಜಾಕಿರ್‌ ಹುಸೇನ್ ಅವರು ತಮ್ಮ ಸ್ನೇಹಿತ ಉಸ್ತಾದ್ ಶಿವಕುಮಾರ್ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದಾರೆ” ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು “ಹೌದು, ಇದು ನನ್ನ ಭಾರತ” ಎಂದು ಒಪ್ಪಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read