ವಾಟ್ಸಾಪ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್: ಸ್ಟೇಟಸ್ ಅವಧಿ ಎರಡು ವಾರಗಳವರೆಗೆ ವಿಸ್ತರಣೆ

ನವದೆಹಲಿ: ಪ್ರಮುಖ ಸಾಮಾಜಿಕ ಜಾಲತಾಣವಾಗಿರುವ ವಾಟ್ಸಾಪ್ ಮೆಸೆಂಜರ್ ‘ಸ್ಟೇಟಸ್’ ಅವಧಿಯನ್ನು ಪ್ರಸ್ತುತ ಇರುವ 24 ಗಂಟೆಗಳ ಬದಲಿಗೆ ಗರಿಷ್ಠ ಎರಡು ವಾರಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.

ಇನ್ನು ವಾಟ್ಸಾಪ್ ಬಳಕೆದಾರರು ಹಾಕಿದ ಸ್ಟೇಟಸ್ ಎರಡು ವಾರಗಳ ಕಾಲ ಉಳಿಸಿಕೊಳ್ಳಬಹುದಾಗಿದೆ. ಪ್ರಸ್ತುತ ಹಾಕುವ ಸ್ಟೇಟಸ್ 24 ಗಂಟೆಗಳವರೆಗೆ ಉಳಿಯುತ್ತದೆ. ಹೊಸ ಅಪ್ಡೇಟ್ ಶೀಘ್ರವೇ ಬಿಡುಗಡೆ ಮಾಡಲಿದ್ದು, ಬಳಕೆದಾರರಿಗೆ ಸ್ಟೇಟಸ್ ಹಾಕುವ ವೇಳೆ ಅದು ಎಷ್ಟು ದಿನ ಉಳಿಸಬೇಕು ಎಂದು ಆಯ್ಕೆ ಮಾಡುವ ಅವಕಾಶ ಸಿಗಲಿದೆ. ಮೂರು ದಿನ, ಒಂದು ವಾರ ಅಥವಾ ಎರಡು ವಾರದ ಆಪ್ಷನ್ ಆಯ್ಕೆ ಮಾಡಿಕೊಂಡು ಸ್ಟೇಟಸ್ ಹಾಕಬಹುದಾಗಿದೆ ಎಂದು ಹೇಳಲಾಗಿದೆ.

ಹೊಸ ಅಪ್ ಡೇಟ್ ಬಿಡುಗಡೆಯಾದ ಬಳಿಕ ವಾಟ್ಸಾಪ್ ಬಳಕೆದಾರರಿಗೆ ಸ್ಟೇಟಸ್ ಅವಧಿ ಎರಡು ವಾರಗಳಿಗೆ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿದೆ.

WhatsApp ಜನರ ಜೀವನದ ಒಂದು ಭಾಗವಾಗಿದೆ. ವಾಟ್ಸಾಪ್ ಚಾನೆಲ್ ಅನ್ನು ರಚಿಸುವುದು ಅಥವಾ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುವುದು, ಜನರು ಪ್ರತಿ ಕಾರ್ಯಕ್ಕೂ ಅದನ್ನು ಬಳಸುತ್ತಿದ್ದಾರೆ. ತನ್ನ ಬಳಕೆದಾರರ ಹೆಚ್ಚುತ್ತಿರುವ ಪ್ರೀತಿ ಮತ್ತು ವಿಶ್ವಾಸವನ್ನು ನೋಡಿ, ಕಂಪನಿಯು ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಲೇ ಇದೆ. ಇತ್ತೀಚೆಗೆ, ಕಂಪನಿಯು WhatsApp ಚಾನೆಲ್ ಅನ್ನು ಹೊರತಂದಿದೆ. ಇದರ ಮೂಲಕ ಬಳಕೆದಾರರು ತಮ್ಮ ಸಂದೇಶವನ್ನು ತಮ್ಮ ಅನುಯಾಯಿಗಳಿಗೆ ತಿಳಿಸಬಹುದು.

ಈಗ ಕಂಪನಿಯು ವಾಟ್ಸಾಪ್ ಸ್ಟೇಟಸ್‌ಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆಯನ್ನು ಮಾಡಲು ಹೊರಟಿದೆ. ಸ್ಟೇಟಸ್ ಅನ್ನು ಎರಡು ವಾರಗಳವರೆಗೆ ವಿಸ್ತರಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read