ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್-ಅವಿವಾಗೆ ‘ದಚ್ಚು’ ಕೊಟ್ಟ ದುಬಾರಿ ಗಿಫ್ಟ್ ಏನು..?

ಬೆಂಗಳೂರು :  ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಷ್ (Abhishek Ambarish)  ಹಾಗೂ ಅವಿವಾ ಜೋಡಿಗೆ ನಟ ದರ್ಶನ್ ಕೂಡ ದುಬಾರಿ ಗಿಫ್ಟ್ ನೀಡಿದ್ದಾರೆ.  ಜೂನ್ 5 ರಂದು ಮದುವೆಗೆ ಹಾಜರಾಗದ ನಟ ದರ್ಶನ್ ಜೂನ್ 7 ರಂದು ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ (reception program) ಹಾಜರಿ ಹಾಕಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗೆ ಶುಭ ಹಾರೈಸಿದ ದಚ್ಚು ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ. ಅವಿವಾಗೆ ನಟ ದರ್ಶನ್ ದುಬಾರಿ ಬೆಲೆಯ ನೆಕ್ಲೇಸ್ ನೀಡಿದ್ದಾರೆ.  ಬಿಳಿ ಹಾಗೂ ತಿಳಿ ಗುಲಾಬಿ ಬಣ್ಣದ ಡೈಮಂಡ್ ಇರುವ ನೆಕ್ಲೇಸ್ ನ್ನು ನಟ ದರ್ಶನ್ (Darshan)

ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ ಸುಮಾರು 30 ಲಕ್ಷದಿಂದ 40 ಲಕ್ಷ ಎನ್ನಲಾಗುತ್ತಿದೆ. ಈ  ವೇಳೆ ದಚ್ಚು ಸುಮಲತಾ ಹಾಗೂ ಅಭಿಷೇಕ್ ಅಂಬರೀಷ್ ಕೆನ್ನೆ ಮುಟ್ಟಿ ಸಂತಸ ವ್ಯಕ್ತಪಡಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read