NDA ಗೆ ಬಹುಮತ ಸಿಗದಿದ್ದರೆ ಸಿದ್ಧವಾಗಿದೆಯಾ ಪ್ಲಾನ್ ಬಿ ? ಚುನಾವಣಾ ಚಾಣಕ್ಯ ನೀಡಿದ್ದಾರೆ ಈ ಉತ್ತರ

ಅಬ್ ಕಿ ಬಾರ್ 400 ಪಾರ್ ಎಂಬುದು ಬಿಜೆಪಿಯ ಘೋಷಣೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 400 ಸೀಟ್ ಗಳನ್ನು ಗೆದ್ದೇ ಗೆಲ್ಲುತ್ತೇವೆಂದು ವಿಶ್ವಾಸದಿಂದ ಹೇಳುತ್ತಲೇ ಇದೆ. ಆದರೆ ವಾಸ್ತವಿಕವಾಗಿ ಹೇಳುವುದಾದರೆ, ಬಿಜೆಪಿ ಸರ್ಕಾರ ರಚಿಸಲು ಬೇಕಾದ ಕನಿಷ್ಠ 272 ಎಂಪಿ ಸ್ಥಾನಗಳನ್ನು ಗೆಲ್ಲುತ್ತದೆಯೇ ಎಂಬುದರ ಕುರಿತು ಇನ್ನೂ ಅನಿಶ್ಚಿತತೆ ಇದೆ.

ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಅಮಿತ್ ಶಾ ಅವರನ್ನು ಬಿಜೆಪಿ 272 ಸ್ಥಾನಗಳನ್ನು ಪಡೆಯದಿದ್ದರೆ ಪ್ಲಾನ್ ಬಿ ಏನು ಎಂದು ಕೇಳಲಾಯಿತು. ಇದಕ್ಕೆ ಅವರು ಸ್ವಾರಸ್ಯಕರ ಪ್ರತಿಕ್ರಿಯೆ ನೀಡಿ, “ಯೋಜನೆಯು 60% ಕ್ಕಿಂತ ಕಡಿಮೆ ಯಶಸ್ಸಿನ ಪ್ರಮಾಣವನ್ನು ಹೊಂದಿದ್ದರೆ ಪ್ಲಾನ್ ಬಿ ಅಗತ್ಯವಿದೆ. ಬಿಜೆಪಿಯ ವಿಷಯದಲ್ಲಿ ನಮಗೆ ಯಾವುದೇ ಆತಂಕವಿಲ್ಲ. 400ರ ಗಡಿ ಮುಟ್ಟಲು ನಾವು ಅತ್ಯಂತ ಆರಾಮದಾಯಕ ಸ್ಥಿತಿಯಲ್ಲಿದ್ದೇವೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ” ಎಂದು ಹೇಳಿದರು.

ಇದೇ ವಿಷಯವನ್ನ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಈ ಬಾರಿ ಬಿಜೆಪಿಯು ತಕ್ಕಮಟ್ಟಿಗೆ ಆರಾಮವಾಗಿ ಅಧಿಕಾರಕ್ಕೆ ಬರುತ್ತದೆ ಎಂದು ಆಶಾವಾದ ವ್ಯಕ್ತಪಡಿಸಿದರು.

“ಅವರು 400 ಸೀಟ್ ಗೆಲ್ಲುತ್ತೇವೆ ಎಂದು ಹೇಳಿದ ಮಾತ್ರಕ್ಕೆ, ಅವರು ಕೇವಲ 272 ಸೀಟ್ ಗಳಿಸಿದರೆ ಅವರು ಸರ್ಕಾರವನ್ನು ರಚಿಸುವುದಿಲ್ಲ ಎಂದು ಅರ್ಥವಲ್ಲ. ಗೆಲುವು ಗೆಲುವೇ. ಮೋದಿ ನೇತೃತ್ವದ ಸರ್ಕಾರ 2024 ರ ಚುನಾವಣೆಯಲ್ಲಿ ಗೆಲ್ಲುವುದು ಖಚಿತವಾಗಿದೆ. ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read