ಸೌಜನ್ಯ ಪ್ರಕರಣದ ಬಗ್ಗೆ ‘ಒಳ್ಳೆ ಹುಡ್ಗ’ ಪ್ರಥಮ್ ಹೇಳಿದ್ದೇನು..?

ಮಂಗಳೂರು : 11 ವರ್ಷದ ಹಿಂದಿನ ಉಜಿರೆಯ ಸೌಜನ್ಯ ಅತ್ಯಾಚಾರ ಕೊಲೆಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಕರಣವನ್ನು ಮರು ತನಿಖೆಗೆ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ. ಪ್ರಕರಣದ ಬಗ್ಗೆ ಇತ್ತೀಚೆಗೆ ನಟ ದುನಿಯಾ ವಿಜಯ್ ಧ್ವನಿ ಎತ್ತಿದ್ದರು. ಈ ಬೆನ್ನಲ್ಲೇ ನಟ ಪ್ರಥಮ್ ಸೋಶಿಯಲ್ ಮೀಡಿಯಾದಲ್ಲಿ ಸೌಜನ್ಯಾ ಪ್ರಕರಣದ ಬಗ್ಗೆ  ಪೋಸ್ಟ್ ಮಾಡಿದ್ದಾರೆ.

ಒಳ್ಳೆ ಹುಡ್ಗ ಪ್ರಥಮ್ ಪೋಸ್ಟ್  ನಲ್ಲಿ ಏನಿದೆ..?

ನನಗಿರೋ contact ಲಿ ವಿಚಾರಿಸಿದೆ;ಸಂತೋಷ್ ರಾವ್ ಗೆ ಆಗಿರೋ ಅನ್ಯಾಯದ ಬಗ್ಗೆ ತೀವ್ರ ದುಃಖವಾಗುತ್ತಿದೆ; ಮಧ್ಯರಾತ್ರಿ ಒಂದು ವರೆಗೆ ಈ tweet ಮಾಡುವಾಗ ನಿಜಕ್ಕೂ ನೋವಾಯ್ತು; ಸಿನಿಮಾ ಮಾಡಿ ಸಾಲದಲ್ಲಿರೋದ್ರಿಂದ ಸಧ್ಯಕ್ಕೆ ದುಡ್ಡಿಲ್ಲ; next attend ಮಾಡೋ ಯಾವುದೇ ಎರಡು programme ನ ದುಡ್ಡನ್ನ ಸಂತೋಷ್ ರಾವ್ ಕುಟುಂಬಕ್ಕೆ ಕೊಡಬೇಕೆಂದಿದ್ದೇನೆ;ಸೌಜನ್ಯ ಗೆ ನ್ಯಾಯ ಸಿಗಬೇಕಾದ್ರೆ ಆಗಿನ investigative officer ನ ಮೊದಲು ವಿಚಾರಣೆಗೆ ಒಳಪಡಿಸಿ;ಸಂತೋಷ್ ಗೆ ಆಗಿರೋ ಅನ್ಯಾಯಕ್ಕೆ ಸರ್ಕಾರ ಕೂಡಲೇ 50 ಲಕ್ಷ ಪರಿಹಾರ ಕೊಡಬೇಕು;

ನಾನು next attend ಮಾಡೋ 2 proggrame ದುಡ್ಡನ್ನ ಕೊಡ್ತೀನಿ.ಸಿನಿಮಾದ ಸಾಲವೇ ಜಾಸ್ತಿ ಇದೆ!ದುಡ್ಡಿಲ್ಲ ನನ್ನ ಹತ್ತಿರ;ನಾನಂತೂ ಬದುಕಿರುವವರೆಗೂ #ಈಶ್ವರನ ಪೂಜೆ ಮಾಡೋದನ್ನ ನಿಲ್ಲಿಸೋದಿಲ್ಲ;ಧರ್ಮಸ್ಥಳಕ್ಕೆ ಹೋಗ್ತೀನಿ.ಮಂಜುನಾಥನಲ್ಲಿ ಎಲ್ಲವನ್ನೂ ತೊರೆದು ಶರಣಾಗ್ತೀನಿ..ಎಂದು ಒಳ್ಳೆ ಹುಡ್ಗ ಪ್ರಥಮ್ ಪೋಸ್ಟ್ ಮಾಡಿದ್ದಾರೆ.

ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಜನ್ಯ 2012 ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಾಪತ್ತೆಯಾಗಿದ್ದಳು. ನಂತರ ಮರುದಿನ ರಾತ್ರಿ ಮಣ್ಣಸಂಕ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಎಸಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಅನುಮಾನದ ಮೇರೆಗೆ ಸಮೀಪದ ಮನೆಯಲ್ಲಿ ವಾಸವಿದ್ದ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು.

https://twitter.com/OPratham/status/1687190464364171264

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read