ಬೆಳಗಿನ ಜಾವ ಹೃದಯಾಘಾತದ ಅಪಾಯ ಹೆಚ್ಚಾಗಲು ಕಾರಣವೇನು…..?

ಒತ್ತಡದ ಜೀವನ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರ್ತಿದೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗ್ತಿದೆ. ಅನೇಕರು ಹೃದಯಾಘಾತಕ್ಕೆ ಬಲಿಯಾಗ್ತಿದ್ದಾರೆ. ಹೆಚ್ಚಿನ ಜನರು ರಾತ್ರಿ ಮಲಗಿದವರು ಬೆಳಿಗ್ಗೆ ಏಳುವುದಿಲ್ಲ. ಬೆಳಗಿನ ಜಾವದಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತದೆ.

ಸಂಶೋಧನೆಯ ಪ್ರಕಾರ, ಬೆಳಿಗ್ಗೆ 6 ಗಂಟೆಗೆ ಹೃದಯಾಘಾತದ ಅಪಾಯ ಹೆಚ್ಚು. ಬೆಳಿಗ್ಗೆ 6 ರಿಂದ ಮಧ್ಯಾಹ್ನದವರೆಗೆ ಹೃದಯಾಘಾತವಾಗುವುದು ಹೆಚ್ಚು. ಈ ಸಮಯದಲ್ಲಿ ರೋಗಿ ಜೀವ ಕಳೆದುಕೊಳ್ಳುವ ಅಪಾಯ ಹೆಚ್ಚಿರುತ್ತದೆ. ಹೃದಯದಲ್ಲಿ ರಕ್ತ ಮತ್ತು ಆಮ್ಲಜನಕದ ಸಂಪೂರ್ಣ ಕೊರತೆ ಕಾಣಿಸಿಕೊಂಡಾಗ, ಹೃದಯ ಸ್ನಾಯುವಿನ ಒಂದು ಭಾಗವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೃದಯಾಘಾತವಾಗುತ್ತದೆ.

 ತಜ್ಞರ ಪ್ರಕಾರ, ಬೆಳಿಗ್ಗೆ 6 ರಿಂದ ಮಧ್ಯಾಹ್ನದವರೆಗೆ, ಸತ್ತ ಸ್ನಾಯು ಕೋಶಗಳು ಶೇಕಡಾ 20 ರಷ್ಟು ಹೆಚ್ಚಾಗುತ್ತವೆ. ಹೃದಯವು ವೇಗವಾಗಿ ಕೆಲಸ ಮಾಡುತ್ತದೆ. ಈ ಕಾರಣದಿಂದಾಗಿ ರಕ್ತದ ಅಪಧಮನಿಗಳು ಸಂಕುಚಿತಗೊಳ್ಳಲು ಪ್ರಾರಂಭಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯು ಬಾಡಿ ಕ್ಲಾಕ್ ಹೊಂದಿರುತ್ತಾನೆ. ಇದು ದೇಹದಲ್ಲಿನ ಹೃದಯ ರಕ್ತನಾಳದ ನಾಳೀಯ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯು ನಿದ್ರೆಯಿಂದ ಎದ್ದಾಗ ಅದು ಹೆಚ್ಚು ಪರಿಣಾಮ ಬೀರುತ್ತದೆ.

ಸಿರ್ಕಾಡಿಯನ್ ಲಯವು ಬೆಳಿಗ್ಗೆ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಸರಿಯಾದ ಆಹಾರ, ಸರಿಯಾದ ವಾತಾವರಣದಲ್ಲಿದ್ದ ವ್ಯಕ್ತಿಗೂ ಹೃದಯಾಘಾತವಾಗುವ ಅಪಾಯವಿದೆ. ಸಿರ್ಕಾಡಿಯನ್ ಬೆಳಿಗ್ಗೆ ಒಬ್ಬ ವ್ಯಕ್ತಿಯನ್ನು ಹೆಚ್ಚು ಸೂಕ್ಷ್ಮವಾಗಿಸುತ್ತದೆ.

 ಈ ಕಾರಣದಿಂದಾಗಿ, ಈ ಸಮಯದಲ್ಲಿ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗಿ ಹೃದಯಾಘಾತದ ಅಪಾಯವಿದೆ. ಬೆಳಿಗ್ಗೆ ಹೃದಯ ದುರ್ಬಲವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಸಾಮರ್ಥ್ಯ ಕಡಿಮೆ ಅಥವಾ ನಗಣ್ಯವಾಗಿರುತ್ತದೆ. ಹಾಗಾಗಿ  ಹೃದಯಾಘಾತಕ್ಕೆ ಒಳಗಾಗುವ ಅಪಾಯ ಹೆಚ್ಚು.

ಹೃದಯಾಘಾತವಾಗದಂತೆ ತಡೆಯಲು ಸಾಕಷ್ಟು ನಿದ್ರೆ ಮಾಡಬೇಕಾಗುತ್ತದೆ. ಒತ್ತಡದಿಂದ ದೂರವಿರಬೇಕು. ಆಲ್ಕೋಹಾಲ್, ಧೂಮಪಾನ, ಕೆಫೀನ್ ಇರುವ ಪದಾರ್ಥಗಳನ್ನು ಸೇವಿಸಬಾರದು. ತಾಜಾ ಹಣ್ಣುಗಳು, ತರಕಾರಿಗಳು, ಹಾಲು, ಡ್ರೈ ಫ್ರೂಟ್ಸ್, ಓಟ್ಸ್, ದ್ವಿದಳ ಧಾನ್ಯಗಳನ್ನು ಸೇವಿಸಬೇಕು. ನಿಯಮಿತವಾಗಿ ಯೋಗ ಮತ್ತು ವ್ಯಾಯಾಮ ಮಾಡಬೇಕು. ಬೊಜ್ಜನ್ನು ನಿಯಂತ್ರಣದಲ್ಲಿಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read