ಅತೃಪ್ತಿಕರ ʼಉದ್ಯೋಗʼ ಯಾವುದು ? ಇಲ್ಲಿದೆ ಹಾರ್ವರ್ಡ್ ವಿವಿ ಅಧ್ಯಯನದಲ್ಲಿ ಬಹಿರಂಗವಾದ ಇಂಟ್ರಸ್ಟಿಂಗ್‌ ಸಂಗತಿ

ನ್ಯೂಯಾರ್ಕ್​: ಅತೃಪ್ತಿಕರ ಕೆಲಸ ಎಂದರೇನು ಎಂದು ಕೇಳಿದರೆ, ಯಾರಾದರೂ ಅತಿಯಾದ ಕೆಲಸ, ಕಡಿಮೆ ವೇತನ, ಕಾರ್ಪೊರೇಟ್ ಶೋಷಣೆ, ಅಸಭ್ಯ ಮೇಲಾಧಿಕಾರಿಗಳು ಎಂದು ಉತ್ತರಿಸಬಹುದು. ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ವಿಶ್ವದ ಅತೃಪ್ತಿಕರ ಉದ್ಯೋಗಗಳಲ್ಲಿ ಒಂದು ಎಂದರೆ ಅದು ಒಂಟಿತನವಂತೆ….!

ಹಾರ್ವರ್ಡ್ ತಂಡವು 1938 ರಿಂದ ಪ್ರಪಂಚದಾದ್ಯಂತ 700 ಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿತು ಮತ್ತು ಅತೃಪ್ತಿಕರ ಉದ್ಯೋಗಗಳು ಹೆಚ್ಚಾಗಿ ಏಕಾಂಗಿತನದಿಂದ ಕೂಡಿದೆ ಎನ್ನುವುದನ್ನು ಅದು ಕಂಡುಕೊಂಡಿದೆ. ಅಂದರೆ ಉದ್ಯೋಗಿಗಳು ತಂಡದೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲದೇ ಏಕಾಂಗಿಯಾಗಿ ಕೆಲಸ ಮಾಡುವುದೇ ಎಂಬುದಾಗಿದೆ.

ಮನೋವೈದ್ಯ ಶಾಸ್ತ್ರದ ಪ್ರಾಧ್ಯಾಪಕ ಮತ್ತು ಹಾರ್ವರ್ಡ್ ಸ್ಟಡಿ ಆಫ್ ಅಡಲ್ಟ್ ಡೆವಲಪ್‌ಮೆಂಟ್‌ನ ನಿರ್ದೇಶಕರಾದ ರಾಬರ್ಟ್ ವಾಲ್ಡಿಂಗರ್ (MD), ನೀವು ಕೆಲಸ-ಜೀವನದ ತೃಪ್ತಿಯನ್ನು ಹೊಂದಿರಬೇಕಾದ ತಂಡದಲ್ಲಿ ಕೆಲಸವಾಗಬೇಕು. ಏಕಾಂಗಿತನವಿದ್ದರೆ ಏನೂ ಸಾಧ್ಯವಿಲ್ಲ. ಇದು ಅತೃಪ್ತಿಕರ ಉದ್ಯೋಗಿಗಳ ಲಕ್ಷಣ ಎಂದಿದ್ದಾರೆ. ಏಕೆಂದರೆ, ತಮ್ಮ ಗೆಳೆಯರೊಂದಿಗೆ ಸಂವಹನ ನಡೆಸಲು ಅವಕಾಶ ಇರುವುದಿಲ್ಲ. ಆದ್ದರಿಂದ ಮನಸ್ಸು, ದೇಹ ಎಲ್ಲವೂ ಅತೃಪ್ತಿಯಾಗಿರುತ್ತದೆ ಎಂದು ಅಧ್ಯಯನ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read