ಹಿರಿಯರ ಅಥ್ಲೆಟಿಕ್ಸ್‌ನಲ್ಲಿ ಮೂರು ಚಿನ್ನದ ಪದಕ ಜಯಿಸಿದ 95ರ ಹಿರಿಯಜ್ಜಿ

ಪೋಲೆಂಡ್‌ನ ಟೋರನ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಒಳಾಂಗಣ ಮಾಸ್ಟರ್‌‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ 2023ರಲ್ಲಿ 95 ವರ್ಷ ವಯಸ್ಸಿನ ಭಗ್ವಾನಿ ದೇವಿ ದಗರ್‌ ಹೆಸರಿನ ಹಿರಿಯ ಅಜ್ಜಿಯೊಬ್ಬರು ಮೂರು ಚಿನ್ನದ ಪದಕಗಳನ್ನು ಜಯಿಸುವ ಮೂಲಕ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂದು ಸಾಬೀತು ಪಡಿಸಿದ್ದಾರೆ.

ತ್ರಿವರ್ಣವನ್ನು ತಮ್ಮ ಬೆನ್ನ ಹಿಂದೆ ಏರಿಸಿಕೊಂಡು ಈ ಕೂಟದಲ್ಲಿ ಚಿನ್ನ ಗೆದ್ದು ಸಂಭ್ರಮಿಸುತ್ತಿರುವ ದಗರ್‌ ಅವರ ವಿಡಿಯೋ ವೈರಲ್ ಆಗಿದೆ.

“ಎಂಥ ಸ್ಪೂರ್ತಿಯ ಸಲೆ! ನಮ್ಮ ನಾರೀ ಶಕ್ತಿ ನಮಗೆ ಹೆಮ್ಮೆ ಮೂಡಿಸಲು ಎಂದೂ ವಿಫಲವಾಗಿಲ್ಲ. 9ನೇ ವಿಶ್ವ ಒಳಾಂಗಣ ಮಾಸ್ಟರ್‌‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌‌ನಲ್ಲಿ ಮೂರು ಚಿನ್ನದ ಪದಕಗಳನ್ನು ಜಯಿಸಿದ ಭಗ್ವಾನೀ ದೇವಿಜೀ ಅವರಿಗೆ ಅಭಿನಂದನೆಗಳು. ನಿಮ್ಮ ಚಾಂಪಿಯನ್ ಮನಸ್ಥಿತಿ ಫಿಟ್ ಇಂಡಿಯಾಗೆ ಸೂಕ್ತವಾದ ನಿದರ್ಶನವಾಗಿದೆ,” ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಹಿರಿಯ ಅಥ್ಲೀಟ್‌ರಿಂದ ಒಂದಷ್ಟು ಟಿಪ್ಸ್ ಪಡೆಯುತ್ತಿರುವ ತಮ್ಮ ವಿಡಿಯೋ ಶೇರ್‌ ಮಾಡಿರುವ ಭಗ್ವಾನಿ, “ಒಂದು ದೀಪವು ಮತ್ತೊಂದು ದೀಪಕ್ಕೆ ಬೆಳಕು ಕೊಡುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ನನ್ನ ಆಟವನ್ನು ಸುಧಾರಿಸಲು ಸದಾ ನೆರವಾಗುವ ನನ್ನ ಸ್ನೇಹಿತೆಯನ್ನು ಭೇಟಿಯಾಗಿ. ಈ ಆಟದ ಸೊಗಸೇ ಇದು,” ಎಂದು ಭಗ್ವಾನಿ ದೇವಿ ಟ್ವೀಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read