ಪಕ್ಷದ ಕಚೇರಿಯಲ್ಲೇ ಶವವಾಗಿ ಪತ್ತೆಯಾದ ಬಿಜೆಪಿ ನಾಯಕ: ಮಹಿಳೆ ಅರೆಸ್ಟ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ಪಕ್ಷದ ಕಚೇರಿಯಲ್ಲಿ ಸ್ಥಳೀಯ ಬಿಜೆಪಿ ನಾಯಕ ಶವವಾಗಿ ಪತ್ತೆಯಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ

ಸ್ಥಳೀಯ ಬಿಜೆಪಿ ನಾಯಕ ನಾಪತ್ತೆಯಾದ್ದು, ದಕ್ಷಿಣ 24 ಪರಗಣ ಜಿಲ್ಲೆಯ ಪಕ್ಷದ ಕಚೇರಿಯಲ್ಲಿ ಪೊಲೀಸರು ಆತನ ಶವವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಮೃತ ಪೃಥ್ವಿರಾಜ್ ನಾಸ್ಕರ್ ಜಿಲ್ಲೆಯಲ್ಲಿ ಪಕ್ಷದ ಸಾಮಾಜಿಕ ಜಾಲತಾಣ ಖಾತೆ ನಿರ್ವಹಣೆಯ ಹೊಣೆ ಹೊತ್ತಿದ್ದರು.

ಪೊಲೀಸರ ಪ್ರಕಾರ, ಶುಕ್ರವಾರ ರಾತ್ರಿ ಪಕ್ಷದ ಕಚೇರಿಯಲ್ಲಿ ನಸ್ಕರ್ ಅವರ ರಕ್ತಸಿಕ್ತವಾಗಿದ್ದ ಶವ ಪತ್ತೆಯಾಗಿದೆ. ಅವರು ನವೆಂಬರ್ 5 ರಿಂದ ನಾಪತ್ತೆಯಾಗಿದ್ದಾಗಿ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಟಿಎಂಸಿ ಹತ್ಯೆ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ

ಏತನ್ಮಧ್ಯೆ, ತೃಣಮೂಲ ಕಾಂಗ್ರೆಸ್(ಟಿಎಂಸಿ) ಹತ್ಯೆಯ ಹಿಂದಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ, ಕೊಲೆಗೆ ಕಾರಣ ವೈಯಕ್ತಿಕವಾಗಿರಬಹುದು ಎಂದು ಹೇಳಿದ್ದಾರೆ. ಬಂಧಿತ ಮಹಿಳೆಯು ಮೃತನಿಗೆ ಹರಿತವಾದ ಆಯುಧಗಳಿಂದ ಹೊಡೆದಿದ್ದು, ಆತನ ಸಾವಿಗೆ ಕಾರಣವಾಯಿತು ಎಂದು ಒಪ್ಪಿಕೊಂಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಶವವನ್ನು ಪತ್ತೆಹಚ್ಚುವ ಮೊದಲು ಪೊಲೀಸ್ ತಂಡವು ಮುಂಭಾಗದ ಬಾಗಿಲು ಮತ್ತು ಒಳಗಿನ ಗೇಟ್ ಅನ್ನು ಬಲವಂತವಾಗಿ ತೆರೆಯಲಾಗಿದೆ. ಪ್ರಾಥಮಿಕ ತನಿಖೆಯ ನಂತರ ಮತ್ತು ಮೊಬೈಲ್ ಫೋನ್‌ಗಳ ಟ್ರ್ಯಾಕಿಂಗ್ ನಂತರ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅವಳು ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆಕೆಗೆ ಬೇರೆ ಯಾರಾದರೂ ನೆರವು ನೀಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read