ಪಶ್ಚಿಮ ಬಂಗಾಳದಲ್ಲಿ ಮಹಿಳೆಯರನ್ನು ತಾಲಿಬಾನ್ ರೀತಿಯಲ್ಲಿ ನೋಡಲಾಗ್ತಿದೆ. ಉತ್ತರ ದಿನಾಜ್‌ಪುರ ಮತ್ತು ಕೂಚ್ ಬೆಹಾರ್‌ನಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಘಟನೆ ನಂತರ, ಈಗ ಉತ್ತರ 24 ಪರಗಣ ಜಿಲ್ಲೆಯಲ್ಲಿ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಟಿಎಂಸಿ ಶಾಸಕ ಮದನ್ ಮಿತ್ರಾ ಅವರ ಆಪ್ತ ಸಹಾಯಕ ಜಯಂತ್ ಸಿನ್ಹಾ ಅವರು ತಮ್ಮ ಗ್ಯಾಂಗ್‌ನೊಂದಿಗೆ ಹುಡುಗಿಯನ್ನು ಥಳಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ರೂಮ್ ನಲ್ಲಿ ಹಲವಾರು ಜನರು ಒಟ್ಟಾಗಿ ಹುಡುಗಿಯನ್ನು ಹೊಡೆಯುತ್ತಿರೋದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ನೋಡಬಹುದು. ಬಾಲಕಿ, ಕಾಲು ಕೈಯನ್ನು ಹಿಡಿದುಕೊಂಡು, ನಿರಂತರವಾಗಿ ಆಕೆಗೆ ಕೋಲಿನಿಂದ ಹೊಡೆಯಲಾಗ್ತಿದೆ. ಇದು ಟಿಎಂಸಿ ಶಾಸಕ ಮದನ್ ಮಿತ್ರ ಅವರ ಆಪ್ತರಾಗಿದ್ದ ಜಯಂತ್ ಸಿನ್ಹಾ ಅವರ ಕಾಂಗರೂ ದರ್ಬಾರು ಎಂದು ವೈರಲ್ ವಿಡಿಯೋದಲ್ಲಿ ಹೇಳಲಾಗಿದೆ. ಇದರಲ್ಲಿ ಆತ ತನ್ನ ಗ್ಯಾಂಗ್ ಜೊತೆ ಸೇರಿ ಹುಡುಗಿಗೆ ಥಳಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಇದಕ್ಕೂ ಮುನ್ನ ಉತ್ತರ ದಿನಾಜ್‌ಪುರ ಜಿಲ್ಲೆಯ ಚೋಪ್ರಾ ಅವರ ವಿಡಿಯೋ ಹೊರಬಿದ್ದಿತ್ತು. ಇದರಲ್ಲಿ ಕೆಲವರು ದಂಪತಿಯನ್ನು ಥಳಿಸುತ್ತಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಜಮುಲ್ ಅಲಿಯಾಸ್ ಜೆಸಿಬಿಯನ್ನು ಬಂಧಿಸಿದ್ದರು.
https://twitter.com/IamTheStory__/status/1810333611670860052?ref_src=twsrc%5Etfw%7Ctwcamp%5Etweetembed%7Ctwterm%5E1810333611670860052%7Ctwgr%5E75fc35abe8eece4f88dba3e092842beedd94ba63%7Ctwcon%5Es1_&ref_url=https%3A%2F%2Fnavbharattimes.indiatimes.com%2Fstate%2Fwest-bengal%2Fkolkata%2Ftmc-leader-talibani-behaviour-in-west-bengal-again-beating-girl-kbow-all-about%2Farticleshow%2F111585483.cms