ತೂಕ ಇಳಿಕೆಗೆ ನೆಲ್ಲಿಕಾಯಿ ಎಷ್ಟೊಂದು ಪರಿಣಾಮಕಾರಿ ಗೊತ್ತಾ..? ಇಲ್ಲಿದೆ ಉಪಯುಕ್ತ ಮಾಹಿತಿ

ನೆಲ್ಲಿಕಾಯಿ ನೋಡೋಕೆ ಚಿಕ್ಕದಾಗಿದ್ರೂ ಸಹ ಪೌಷ್ಠಿಕಾಂಶದ ರತ್ನವಾಗಿದೆ. ಇವುಗಳಲ್ಲಿ ಅಗಾಧ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಯನ್ನು ಹೊಂದಿದೆ. ಇದರಲ್ಲಿ ಅಗಾಧ ಪ್ರಮಾಣದಲ್ಲಿರುವ ವಿಟಾಮಿನ್​ ಸಿ ಅಂಶವು ಆರೋಗ್ಯಕರ ಚರ್ಮ ಹಾಗೂ ಜೀವನಿರೋಧಕ ಶಕ್ತಿಯನ್ನು ಹೊಂದಿದೆ.

ನೆಲ್ಲಿಕಾಯಿ ಜ್ಯೂಸ್, ಪೌಡರ್​, ನೇರವಾಗಿ ಹೀಗೆ ಯಾವುದೇ ರೂಪದಲ್ಲಿಯಾದರೂ ಸೇವನೆ ಮಾಡಬಹುದು. ಇದನ್ನು ಜ್ಯೂಸ್​ ಮಾಡಿ ಸೇವನೆ ಮಾಡುತ್ತಾರೆ. ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ಇದು ಹೇಳಿಮಾಡಿಸಿದಂತಿದೆ.

ನೆಲ್ಲಿಕಾಯಿ ತೂಕ ಇಳಿಕೆಗೆ ಒಳ್ಳೆಯದೇ..?

ನಾರಿನಂಶವಿರುವ ಹಣ್ಣು: ನೆಲ್ಲಿಕಾಯಿ ಜ್ಯೂಸ್ ಫೈಬರ್‌ನ ಉತ್ತಮ ಮೂಲವಾಗಿದೆ, ಇದು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಸ್ವಾಭಾವಿಕವಾಗಿ, ನಿಮಗೆ ಹೊಟ್ಟೆ ತುಂಬಿದ ಅನುಭವವಾದ ಬಳಿಕ ನೀವು ಮತ್ತೆ ಏನನ್ನೂ ತಿನ್ನಲಾರಿರಿ. ಇದರಿಂದ ತೂಕ ಇಳಿಕೆಗೆ ಸಹಾಯವಾಗಲಿದೆ. .

ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ: ನೆಲ್ಲಿಕಾಯಿಯ ಕ್ಷಾರೀಯ ಗುಣಲಕ್ಷಣಗಳು ದೇಹವನ್ನು ಶುದ್ಧೀಕರಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಜ್ಯೂಸ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಉತ್ತಮವಾಗಿದೆ, ಏಕೆಂದರೆ ಇದು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ.

ಮಧುಮೇಹ ನಿಯಂತ್ರಣ: ನೆಲ್ಲಿಕಾಯಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಕ್ರೋಮಿಯಂ ಎಂಬ ಅಂಶವನ್ನು ಹೊಂದಿರುತ್ತದೆ. ಪರಿಣಾಮವಾಗಿ, ನೆಲ್ಲಿಕಾಯಿ ಜ್ಯೂಸ್ ಕುಡಿಯುವುದು ಸಾಮಾನ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಧುಮೇಹ ಮತ್ತು ಅದರೊಂದಿಗೆ ಬರುವ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read