ತೂಕದಲ್ಲಿ ಮೋಸ: ಕಂಪನಿ ಕೆಲಸಗಾರನ ಮರಕ್ಕೆ ಕಟ್ಟಿದ ಕೋಳಿ ಫಾರಂ ಮಾಲೀಕ

ಮಂಡ್ಯ: ಕೋಳಿ ಫಾರಂನಲ್ಲಿ ಕೋಳಿ ತುಂಬುವ ವೇಳೆ ತೂಕದಲ್ಲಿ ಮೋಸ ಮಾಡಿದ ಎನ್.ಆರ್. ಚಿಕನ್ ಕಂಪನಿ ಕೆಲಸಗಾರನನ್ನು ಕೋಳಿ ಫಾರಂ ಮಾಲಿಕ ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.

ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿಯಲ್ಲಿ ಮಂಗಳವಾರ ಘಟನೆ ನಡೆದಿದೆ. ಮೈಸೂರು ಮೂಲದ ಎನ್.ಆರ್. ಕಂಪನಿ ಕೆಲಸಗಾರ ಲಕ್ಷ್ಮಣ್ ತೂಕದಲ್ಲಿ ಮೋಸ ಮಾಡಿ ಸಿಕ್ಕಿ ಬಿದ್ದಿದ್ದಾನೆ. ರೈತ ಹನುಮಂತೇಗೌಡರ ಕೋಳಿ ಫಾರಂನಲ್ಲಿ ಆಟೋಗೆ ಕೋಳಿ ತುಂಬುವಾಗ ತೂಕದಲ್ಲಿ ಮೋಸ ಮಾಡಲಾಗಿದೆ. ಕೋಳಿ ಬಾಕ್ಸ್ ಗಳನ್ನು ಆಟೋದಿಂದ ಕೆಳಗಿಳಿಸಿ ಮತ್ತೆ ತೂಕ ಮಾಡಿದಾಗ ಒಂದು ಬಾಕ್ಸ್ ಗೆ ನಾಲ್ಕರಿಂದ ಐದು ಕೆಜಿ ತೂಕ ವ್ಯತ್ಯಾಸ ಕಂಡು ಬಂದಿದೆ. 10 ಬಾಕ್ಸ್ ಗೆ ಸುಮಾರು 30 ರಿಂದ 40 ಕೆಜಿ ತೂಕದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಆಕ್ರೋಶಕೊಂಡ ಹನುಮಂತೇಗೌಡ ಮರಕ್ಕೆ ಲಕ್ಷ್ಮಣನನ್ನು ಕಟ್ಟಿ ಹಾಕಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ವಂಚಕ ಕೆಲಸಗಾರ ಲಕ್ಷ್ಮಣನಿಂದ ಕೋಳಿ ಫಾರಂ ಮಾಲೀಕನಿಗೆ 15,000 ರೂ. ದಂಡ ಕಟ್ಟಿಸುವುದಾಗಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read