ಮದುವೆ ಸಂಭ್ರಮದ ಮದುವೆಯಲ್ಲಿ ಸೂತಕದ ಛಾಯೆ; ವಿಷ ಕುಡಿದು ವರ ಸಾವು, ವಧು ಸ್ಥಿತಿ ಗಂಭೀರ

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ತಮ್ಮ ವಿವಾಹ ಸಮಾರಂಭದ ವೇಳೆ ನಡೆದ ವಾಗ್ವಾದದ ನಂತರ ವಧು-ವರರಿಬ್ಬರೂ ವಿಷ ಸೇವಿಸಿದ್ದು , ಘಟನೆಯಲ್ಲಿ 21 ವರ್ಷದ ವರ ಸಾವನ್ನಪ್ಪಿದರೆ ವಧು ಗಂಭೀರ ಸ್ಥಿತಿಯಲ್ಲಿದ್ದಾರೆ.

ಆಸ್ಪತ್ರೆಯಲ್ಲಿ ವರ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದು, ವಧು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್‌ಐ) ರಂಜಾನ್ ಖಾನ್, ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಜಗಳ ನಡೆದ ಕಾರಣ ವರನು ವಿಷ ಸೇವಿಸಿ ತನ್ನ 20 ವರ್ಷದ ವಧುವಿಗೆ ಈ ವಿಷಯವನ್ನು ತಿಳಿಸಿದ್ದಾನೆ. ವರ ವಿಷ ಸೇವಿಸಿರುವುದು ಗೊತ್ತಾದ ತಕ್ಷಣ ವಧು ಕೂಡ ವಿಷ ಕುಡಿದಿದ್ದಾಳೆ. ವರ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದು, ಜೀವರಕ್ಷಕ ವ್ಯವಸ್ಥೆಯಲ್ಲಿರುವ ವಧು ಸ್ಥಿತಿ ಚಿಂತಾಜನಕವಾಗಿದೆ. ಎಂದರು.

ಪೊಲೀಸರ ಪ್ರಕಾರ ಕಳೆದ ಹಲವು ದಿನಗಳಿಂದ ಮಹಿಳೆ ತನ್ನನ್ನು ಮದುವೆಯಾಗುವಂತೆ ವರನ ಕುಟುಂಬ ಸದಸ್ಯರಿಗೆ ಒತ್ತಡ ಹೇರುತ್ತಿದ್ದಳಂತೆ. ಆದರೆ ವರನ ವೃತ್ತಿ ಜೀವನ ಉತ್ತಮ ಸ್ಥಿತಿಗೆ ಬರುವವರೆಗೆ ಎರಡು ವರ್ಷಗಳ ಕಾಲಾವಕಾಶ ಕೋರಿದಾಗ ಮಹಿಳೆ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳಂತೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read