ಮದುವೆ ಮಂಟಪದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಜಗಳ: ಮುರಿದು ಬಿದ್ದ ವಿವಾಹ

ಚಿತ್ರದುರ್ಗ: ಮದುವೆ ಮಂಟಪದಲ್ಲಿ ಕುಡಿಯುವ ನೀರು ಸರಿಯಾಗಿ ವಿತರಿಸಿಲ್ಲ ಎನ್ನುವ ಕಾರಣಕ್ಕೆ ಮದುವೆಯೇ ಮುರಿದು ಬಿದ್ದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಬಲಿಜ ಶ್ರೇಯಾ ಭವನದಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆ ಜಗಲೂರಿನ ವರ ಎನ್. ಮನೋಜ್ ಕುಮಾರ್, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿರತಹಳ್ಳಿಯ ವಧು ಸಿ.ಎ. ಅನಿತಾ ಅವರ ವಿವಾಹ ಅರತಕ್ಷತೆ ಸಮಾರಂಭ ಹಿರಿಯೂರಿನ ಬಲಿಜ ಶ್ರೇಯಾ ಭವನದಲ್ಲಿ ಶನಿವಾರ ರಾತ್ರಿ ನಡೆದಿದೆ. ತಡವಾಗಿ ಬಂದ ಕೆಲವರು ಊಟಕ್ಕೆ ಕುಳಿತಿದ್ದ ವೇಳೆ ಕೇಟರಿಂಗ್ ಸಿಬ್ಬಂದಿ ಸರಿಯಾಗಿ ಕುಡಿಯುವ ನೀರು ವಿತರಿಸಿಲ್ಲ ಎನ್ನುವ ಕಾರಣಕ್ಕೆ ವಧು, ವರರ ಕಡೆಯವರ ನಡುವೆ ಜಗಳವಾಗಿದೆ.

ಭಾನುವಾರ ಬೆಳಗ್ಗೆವರೆಗೂ ಜಗಳ ಮುಂದುವರೆದಿದ್ದು, ಸಂಧಾನ ನಡೆಸಿದರೂ ಪ್ರಯತ್ನ ಫಲ ಕೊಟ್ಟಿಲ್ಲ. ಭಾನುವಾರ ಬೆಳಗ್ಗೆ 10.30 ಕ್ಕೆ ಮುಹೂರ್ತ ನಿಗದಿಯಾಗಿದ್ದು, ಹಿರಿಯರು, ಸಂಬಂಧಿಕರು ಹೇಳಿದರೂ ಮದುವೆ ಮುರಿದು ಬಿದ್ದಿದೆ. ಇಂಜಿನಿಯರಿಂಗ್ ಪದವೀಧರರಾಗಿರುವ ವಧು, ವರರ ಜಗಳದ ಕಾರಣ ಮದುವೆ ನಿಂತು ಹೋಗಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read