ಭೌತಿಕ ಸುಖ ಪ್ರಾಪ್ತಿಯಾಗಲು ಪ್ರತಿ ದಿನ ಹಾಕಿಕೊಳ್ಳಿ ಸುಗಂಧ ದ್ರವ್ಯ

Perfume Poisoning: Symptoms, Dangers, and What to Do

ಪರಿಪೂರ್ಣ ಜೀವನ ನಡೆಸಬೇಕೆಂಬುದು ಎಲ್ಲರ ಬಯಕೆ. ಆದ್ರೆ ಯಾವುದೂ ನಾವು ಬಯಸಿದಂತೆ ಆಗುವುದಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಕರ್ಮ ಹಾಗೂ ಗ್ರಹಗತಿ. ಗ್ರಂಥಗಳ ಪ್ರಕಾರ ಜೀವನದಲ್ಲಿ ಕೊರತೆ ಕಾಣಿಸಿಕೊಳ್ಳಲು ಬಹು ಮುಖ್ಯ ಕಾರಣ ಶುಕ್ರ ಗ್ರಹ. ಶುಕ್ರ ದುರ್ಬಲನಾಗಿದ್ದರೆ ಭೌತಿಕ ಸುಖ ಪ್ರಾಪ್ತಿಯಾಗುವುದಿಲ್ಲ.

ಶುಕ್ರ ಗ್ರಹ ಹಾಗೂ ಸುಗಂಧಕ್ಕೆ ಬಹಳ ಹತ್ತಿರದ ಸಂಬಂಧವಿದೆ. ಇದಕ್ಕೆ ಸಂಬಂಧಿಸಿದ ಕೆಲ ಉಪಾಯಗಳನ್ನು ಅನುಸರಿಸುವುದರಿಂದ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ಅಲ್ಲದೆ ಆರೋಗ್ಯ ಸಂಬಂಧಿ ಸಮಸ್ಯೆ ದೂರವಾಗುತ್ತದೆ.

ಪ್ರತಿ ದಿನ ಮನೆಯಿಂದ ಹೊರಗೆ ಹೋಗುವ ಮೊದಲು ನಿಮ್ಮ ಹೊಕ್ಕಳಿಗೆ ಶ್ರೀಗಂಧ ಅಥವಾ ಗುಲಾಬಿ, ಮಲ್ಲಿಗೆ ಸುಗಂಧ ದ್ರವ್ಯವನ್ನು ಹಚ್ಚಿಕೊಳ್ಳಿ. ಇದ್ರಿಂದ ಸಂಪತ್ತು ಹಾಗೂ ವೈಭವದ ಜೀವನ ನಿಮ್ಮದಾಗುತ್ತದೆ.

ಶ್ರೀಗಂಧ ಅಥವಾ ಮಲ್ಲಿಗೆ ಸುಗಂಧ ದ್ರವ್ಯವನ್ನು ಹೊಕ್ಕಳಿಗೆ ಹಚ್ಚಿಕೊಳ್ಳುವುದರಿಂದ ಮೈಗ್ರೇನ್, ತಲೆ ನೋವು. ಕೋಪ ಹಾಗೂ ನಿದ್ರೆಯ ಸಮಸ್ಯೆ ದೂರವಾಗುತ್ತದೆ.

ಕೈ ಬೆರಳಿನ ಉಗುರಿಗೆ ಸುಗಂಧ ದ್ರವ್ಯ ಹಚ್ಚಿಕೊಳ್ಳುವುದರಿಂದ ಹೊಟ್ಟೆ ಸಂಬಂಧಿ ಸಮಸ್ಯೆ ದೂರವಾಗುತ್ತೆ.

ಆರ್ಥಿಕ ಸಮಸ್ಯೆಯಿದ್ದಲ್ಲಿ 21 ಮಂಗಳವಾರ ಹನುಮಂತನ ದೇವಸ್ಥಾನಕ್ಕೆ ಹೋಗಿ ಹನುಮಂತನಿಗೆ ಮಲ್ಲಿಗೆ ಎಣ್ಣೆ, ಕೇದಿಗೆಯಿಂದ ಮಾಡಿದ ಸುಗಂಧ ಹಾಗೂ 5 ಗುಲಾಬಿ ಹೂವನ್ನು ಅರ್ಪಣೆ ಮಾಡಬೇಕು. ಇದನ್ನು ಗುಪ್ತವಾಗಿ ಮಾಡಿದ್ರೆ ಫಲ ಜಾಸ್ತಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read