Anna Bhagya Scheme : ಆಧಾರ್ ಲಿಂಕ್ ಖಾತೆಗೆ ಹಣ ಹಾಕಿ ಎಂದರೆ ಹಾಕುತ್ತೇವೆ : ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು : ಅಕ್ಕಿ ಸಿಗುವವರೆಗೂ ಹಣ ನೀಡುತ್ತೇವೆ, ಶೇಕಡಾ 80ರಿಂದ 85ರಷ್ಟು  ಕಾರ್ಡ್ ದಾರರ  ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್ ಶೇಕಡಾ 15-20ರಷ್ಟು ಕಾರ್ಡ್ದಾರರ ಅಕೌಂಟ್ ಟ್ರೇಸ್ ಆಗಬೇಕು. ಶೇಕಡಾ 80ರಿಂದ 85ರಷ್ಟು ಕಾರ್ಡ್ದಾರರ ಖಾತೆಗೆ ಆಧಾರ್ ಲಿಂಕ್ ಆಗಿದೆ , ಆಧಾರ್ ಲಿಂಕ್ ಖಾತೆಗೆ ಹಣ ಕೊಡಿ ಎಂದರೆ ಹಾಕುತ್ತೇವೆ ಎಂದು ಹೇಳಿದರು.

ಬಿಜೆಪಿ ನಾಯಕರ ಹೋರಾಟವನ್ನು ನಾವು ತಡೆಯುವುದಿಲ್ಲ. . ನಮ್ಮ ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಯಾವ ವಿಚಾರಕ್ಕೂ ಯುದ್ಧ ಮಾಡಲು ನಮಗೆ ಇಷ್ಟವಿಲ್ಲ. ಅವರೆಲ್ಲ ನಮ್ಮ ಬ್ರದರ್ಸ್. ತಮಿಳುನಾಡಿನವರು ಇಲ್ಲಿದ್ದಾರೆ, ಕರ್ನಾಟಕದವರೂ ತಮಿಳುನಾಡಿನಲ್ಲಿ ಕೆಲಸದಲ್ಲಿದ್ದಾರೆ. ಎರಡೂ ರಾಜ್ಯದವರು ಕುಳಿತು ಬಗೆಹರಿಸಿಕೊಳ್ಳೋಣ ಎಂಬುದು ನಮ್ಮ ಆಶಯ ಅಷ್ಟೇ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read