ಈ ಫೋಟೋದಲ್ಲಿರುವ ಅಡಗಿರುವ ಚಿರತೆಯನ್ನು ಗುರುತಿಸಬಲ್ಲಿರಾ ?

ನಿಮಗೆ ಈ ದಿನವೆಲ್ಲಾ ತುಂಬಾ ಬೋರ್ ಎಂದೆನಿಸಿದ್ರೆ, ನಿಮ್ಮ ತಲೆಗೆ ಹುಳ ಬಿಡುವ ಕೆಲಸ ಇಲ್ಲಿದೆ. ಅರಣ್ಯ ಪ್ರದೇಶವೊಂದರ ಚಿತ್ರವನ್ನು ಇಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಎಲ್ಲೋ ಅಡಗಿರುವ ಚಿರತೆಯನ್ನು ನೀವು ಗುರುತಿಸಬೇಕು ಅಷ್ಟೇ.

ಹೇಮಂತ್ ದಾಬಿ ಎಂಬ ವನ್ಯಜೀವಿ ಛಾಯಾಗ್ರಾಹಕ ಚಿರತೆಯ ಚಿತ್ರವನ್ನು ಕೆಲವು ಅವಶೇಷಗಳಲ್ಲಿ ಸಂಪೂರ್ಣವಾಗಿ ಮರೆಮಾಚಿ ಹಂಚಿಕೊಂಡಿದ್ದಾರೆ. ನೆಟ್ಟಿಗರಿಗೆ ಅದನ್ನು ಗುರುತಿಸಲು ತುಂಬಾ ಕಷ್ಟಕರವಾಗಿತ್ತು. ವೈರಲ್ ಚಿತ್ರವನ್ನು ಟ್ವಿಟರ್‌ನಲ್ಲಿ ಆಕರ್ಷಕ ಎಂಬ ಪುಟವೂ ಹಂಚಿಕೊಂಡಿದೆ. ಅವಶೇಷಗಳ ನಡುವೆ ಎಲ್ಲೋ ಅಡಗಿರುವ ಚಿರತೆಯೊಂದು ಚಿತ್ರದಲ್ಲಿದೆ.

ಹೇಮಂತ್ ದಾಬಿ ಅವರ ಈ ಫೋಟೋದಲ್ಲಿ ಚಿರತೆ ಇದೆ. ನೀವು ಅದನ್ನು ಕಂಡುಕೊಳ್ಳಬಹುದೇ? ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಚಿರತೆಯನ್ನು ಗುರುತಿಸಲು ಸಾಕಷ್ಟು ಕಷ್ಟಪಟ್ಟರು. ನಿಮಗೂ ಚಿತ್ರದಲ್ಲಿ ಚಿರತೆ ಹುಡುಕಲು ಕಷ್ಟವಾಗುತ್ತಿದೆಯೇ? ಹಾಗಿದ್ದರೆ ನಾವು ಸಹಾಯ ಮಾಡುತ್ತೇವೆ. ಮರದ ಹತ್ತಿರ ಜೂಮ್ ಮಾಡಿ ನೋಡಿ ಕಲ್ಲುಗಳ ನಡುವೆ ಆರಾಮವಾಗಿ ಕುಳಿತಿರುವ ಚಿರತೆ ನಿಮಗೆ ಕಾಣಿಸುತ್ತದೆ.

https://twitter.com/fasc1nate/status/1651283158388580352?ref_src=twsrc%5Etfw%7Ctwcamp%5Etweetembed%7Ctwterm%5E1651283158388580352%7Ctwgr%5E6a0b7f5865f5bb7303adee3b8a9645a4c0f63aae%7Ctwcon%5Es1_&ref_url=https%3A%2F%2Fd-27445811483598866000.ampproject.net%2F2304132133000%2Fframe.html

https://twitter.com/ZakSilverstein/status/1651309146443055113?ref_src=twsrc%5Etfw%7Ctwcamp%5Etweetembed%7Ctwterm%

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read