BIG NEWS : ಬಹಳ ಮೋಸ ಆದಾವು, ಹೆಣನೂ ಹೋದಾವು, ಕುರ್ಚಿ ಮಾತ್ರ ಅದೇ ಗಟ್ಟಿ : ಭವಿಷ್ಯ ನುಡಿದ ಲಾಲಸಾಬ್ ಅಜ್ಜ

ಬಾಗಲಕೋಟೆ : ಬಹಳ ಮೋಸ ಆದಾವು, ಹೆಣನೂ ಹೋದಾವು …ಕುರ್ಚಿ ಮಾತ್ರ ಅದೇ ಗಟ್ಟಿ…ಹೀಗಂತ ಬಾಗಲಕೋಟೆಯ ಲಾಲಸಾಬ್ ಅಜ್ಜ ಭವಿಷ್ಯ ನುಡಿದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದ ಲಾಲಸಾಬವಲಿ ದರ್ಗಾದಲ್ಲಿ ಪ್ರತಿವರ್ಷ ಅಜ್ಜ ಭವಿಷ್ಯ ಹೇಳುತ್ತಾರೆ. ಅಂತೆಯೇ ಈ ವರ್ಷ ಕೂಡ ಭವಿಷ್ಯ ನುಡಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೇಸರಿ ವಸ್ತ್ರ ಹಿಡಿದು ಭವಿಷ್ಯ ನುಡಿದ ಅಜ್ಜ ‘ ಈ ವರ್ಷ ಬಹಳ ಜನ ಗುದ್ದಾಡ್ತಾರೆ, ಭಾರಿ ಮೋಸ ಆದಾವು, ಹೆಣನೂ ಹೋದಾವು. ಆದರೆ ಬೇಕಾದರೆ ಬರೆದಿಟ್ಟುಕೊಳ್ಳಿ..ಖುರ್ಚಿ ಮಾತ್ರ ಅದೇ ಗಟ್ಟಿ ಪಾ ಎಂದು ಅಜ್ಜ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಭವಿಷ್ಯವನ್ನು ಅಜ್ಜ ನುಡಿದಿದ್ದಾರೆ. ಬರೆದಿಟ್ಟುಕೊಳ್ಳುವರು ಬರೆದಿಟ್ಟುಕೊಳ್ಳಿ, ವಿಡಿಯೋ ಮಾಡುವವರು ವಿಡಿಯೋ ಮಾಡಿಕೊಳ್ಳಿ. ಎಷ್ಟೇ ಮಾಡಿದ್ರೂ ಮೇಟಿ ಮಾತ್ರ ಗಟ್ಟಿ ಇದೆಯಪ್ಪ, ಕಲ್ಯಾಣ ದೇಶಕ್ಕೆ ಬರ ಐತೆ ಎಂದು ಹೇಳಿಬಿಟ್ಟಿದ್ದೀನಿ..ಈಗಲೂ ಹೇಳ್ತೀನಿ. ಜೋಳ, ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡಿ ಯಾವುದರಲ್ಲೂ ನಾನು ಕೈ ಬಿಡುವುದಿಲ್ಲ . ಕೇಸರಿ ವಿಚಾರಕ್ಕೆ ಬಹಳ ಗುದ್ದಾಡುತ್ತಾರೆ ಎಂದು ಲಾಲಸಾಬ್ ಅಜ್ಜ ಭವಿಷ್ಯ ನುಡಿದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read