‘ಲೂಟಿ ಹೊಡೆಯೋಕೆ ನಾವ್ ರೆಡಿ..! : ರಾಜ್ಯ ಸರ್ಕಾರದ ವಿರುದ್ಧ ಮುಂದುವರೆದ ‘ಬಿಜೆಪಿ’ ಪೋಸ್ಟರ್ ವಾರ್

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತೊಂದು ಪೋಸ್ಟರ್ ಹರಿಬಿಟ್ಟು ತೀವ್ರವಾಗಿ ವಾಗ್ಧಾಳಿ ನಡೆಸಿದೆ.

ಟ್ವೀಟ್ ಮಾಡಿರುವ ಬಿಜೆಪಿ ‘ಕರ್ನಾಟಕವನ್ನು “ಲೂಟಿ ಗ್ಯಾಂಗ್” ಸಕ್ರಿಯವಾಗಿ ಲೂಟಿಗೈಯುತ್ತಿದೆ. ಈ ಲೂಟಿ ಗ್ಯಾಂಗ್ನಿಂದ ಕನ್ನಡಿಗರು ಮತ್ತಷ್ಟು ಕಷ್ಟ-ನಷ್ಟ-ಸಂಕಷ್ಟ ಅನುಭವಿಸುವುದು ಖಚಿತ-ನಿಶ್ಚಿತ-ಖಂಡಿತ ಎಂದಿದೆ.

ರಾಜ್ಯ ಕಂಡ ಅತಿ ಭ್ರಷ್ಟ ಸರ್ಕಾರವಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಲೆಕ್ಷನ್ ಕಲೆ ಮಿತಿಮೀರಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಜನ ಕಂದಾಯ ಇಲಾಖೆಗೆ ಕಟ್ಟುವ ಹಣವೆಲ್ಲಾ ಸಿಬ್ಬಂದಿಗಳ ಖಾಸಗಿ ಖಾತೆಗೆ ಜಮೆ ಆಗುತ್ತಿತ್ತು ಎಂದರೆ ಈ ಸರ್ಕಾರ ಅದಿನ್ನೆಂಥ ಭ್ರಷ್ಟ ಜಾಲವನ್ನು ಹೆಣೆದಿದೆ ಎಂಬುದು ಸ್ಪಷ್ಟವಾಗುತ್ತಿದೆ. ದೆಹಲಿಯಲ್ಲಿರುವ ಕಾಂಗ್ರೆಸ್ನ ಕಲೆಕ್ಷನ್ ಏಜೆಂಟರು ಸದ್ಯದಲ್ಲೇ ನಮ್ಮ ರಾಜ್ಯಕ್ಕೆ ಮತ್ತೆ ಭೇಟಿ ನೀಡುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಅಭಿವೃದ್ಧಿ ನಿಗಮಗಳಿಂದ ಸಾವಿರ ಕೋಟಿ ರೂಪಾಯಿ ಖಾಸಗಿ ಬ್ಯಾಂಕ್ಗಳಿಗೆ ಜಮೆಯಾದಂತೆ ಕಂದಾಯ ಇಲಾಖೆಗೆ ಸಂದಾಯವಾದ ರಾಜಸ್ವವೇ ಗುಳುಂ ಆಗುತ್ತಿದೆಯಲ್ಲ ಮುಖ್ಯಮಂತ್ರಿಗಳೇ, ಇನ್ನೆಷ್ಟು ಚುನಾವಣೆಗಳಿಗೆ ಹಣ ಕಲೆಕ್ಷನ್ ಮಾಡುವ ಹೊಣೆ ಹೊತ್ತಿದ್ದೀರಿ? ಎಂದು ಬಿಜೆಪಿ ಕಿಡಿಕಾರಿದೆ.

https://twitter.com/BJP4Karnataka/status/1799385870816137576

 

https://twitter.com/BJP4Karnataka/status/1799349221809910138

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read