ರಾಜ್ಯದ ಜನತೆಗೆ ದಿನಕ್ಕೊಂದು ಬೆಲೆ ಏರಿಕೆ ಬರೆ! ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ರಾಜ್ಯದ ಜನರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ನೀರಿನ ದರ ಎರಿಕೆ ಮಾಡುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದಾರೆ.

ಕಳೆದ 12 ವರ್ಷಗಳಿಂದ ನೀರಿನ ದರ ಏರಿಸಿಲ್ಲ. ಈಗ ನೀರಿನ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ. ನೀರಿನ ದರ ಏರಿಕೆಗೆ ಮುಂದಾಗಿರುವ ರಾಜ್ಯ  ಸರ್ಕಾರದ ಚಿಂತನೆಗೆ ವಿಪಕ್ಷ ಬಿಜೆಪಿ ಕಿಡಿಕಾರಿದೆ.

ಕರುನಾಡಿನ ಜನತೆಗೆ ದಿನಕ್ಕೊಂದು ದರ ಏರಿಕೆಯ ಬರೆ! ಭ್ರಷ್ಟ‌ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತದಲ್ಲಿ ಜನಸಾಮಾನ್ಯರು ಬೆಲೆಯೇರಿಕೆಯಿಂದ ತತ್ತರಿಸುತ್ತಿದ್ದಾರೆ. ಈಗ ಜನರ ದಿನಬಳಕೆಯ ನೀರಿನ ದರವನ್ನೂ ಏರಿಸಲು ಹೊರಟಿದೆ ಕೈ ಸರ್ಕಾರ  ಎಂದು ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದ ಖಜಾನೆಯನ್ನೆಲ್ಲಾ ಲೂಟಿ ಹೊಡೆದು ಈಗ ಖರ್ಚಿನ ಹೊರೆಯನ್ನು ಜನರ ಮೇಲೆ ಹೊರಿಸಲು ʼಸಿದ್ದʼವಾಗಿದೆ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read