ಆಘಾತಕಾರಿ ಎಂದೇ ಹೇಳಬಹುದಾದ ಘಟನೆಯೊಂದರಲ್ಲಿ ನಡುರಸ್ತೆಯಲ್ಲಿ ಗೂಂಡಾಗಳು ಕಾರುಗಳನ್ನು ನಿಲ್ಲಿಸಿಕೊಂಡು ಮನಬಂದಂತೆ ಕುಣಿದಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಇವರಲ್ಲಿ ಅನೇಕರು ತಮ್ಮ ಕಾರುಗಳ ಸನ್‌ರೂಫ್‌ಗಳಿಂದ ಹೊರಗೆ ತಲೆ ಹಾಕಿ ಕುಣಿಯುತ್ತಿದ್ದರೆ ಇನ್ನೂ ಕೆಲವರು ಚಲಿಸುತ್ತಿರುವ ತಮ್ಮ ಕಾರುಗಳಿಂದ ಆಚೆಗೆ ತಲೆ ಹಾಕಿಕೊಂಡು ಕುಣಿಯುತ್ತಿದ್ದು. ಇವುಗಳಲ್ಲಿ ಒಂದು ಕಾರಿಗೆ ಬಿಜೆಪಿಯ ಧ್ವಜವಿತ್ತು ಎನ್ನಲಾಗಿದೆ.
ಈ ಜನರು ತಮ್ಮ ಕಾರುಗಳು ಹಾಗು ಗುಂಪಿನ ಬಲವನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವ ದೌಲತ್ತಿನಿಂದಲೇ ಹೀಗೆ ಆಡುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಅನೇಕರು ತಿಳಿಸಿದ್ದಾರೆ. ಇದೇ ವೇಳೆ, ರಸ್ತೆಯ ಮಧ್ಯದಲ್ಲೇ ಕಾರುಗಳನ್ನು ನಿಲ್ಲಿಸಿ ಕುಣಿದಾಡಿದ್ದಾರೆ ಎಂದೂ ಸಹ ತಿಳಿದು ಬಂದಿದೆ. ಇವರ ಈ ನಡವಳಿಕೆಯಿಂದ ರಸ್ತೆಯಲ್ಲಿದ್ದ ಇತರ ಸಂಚಾರಿಗಳಿಗೆ ಭಾರೀ ತೊಂದರೆಯಾಗಿದೆ.
ಘಟನೆಯ ವಿಡಿಯೋ ವೈರಲ್ ಆಗಿದೆ. ಕೂಡಲೇ ದೆಹಲಿ ಪೊಲೀಸರು ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, “ಘಟನೆಯ ಬಗ್ಗೆ ನಮಗೆ ತಿಳಿದು ಬಂದಿದೆ. ಹೀಗೆ ಮಾಡಿದವರ ವಿವರಗಳನ್ನು ಕಲೆ ಹಾಕುತ್ತಿದ್ದೇವೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ತಪ್ಪಿತಸ್ಥರನ್ನು ಪತ್ತೆ ಮಾಡಲು ನಮಗೆ ನೆರವಾಗಲು ಡಿಎಂ ಮಾಡಿ. ನಿಮ್ಮ ಅನಾಮಧೇಯತೆಯನ್ನು ಕಾಪಾಡುತ್ತೇವೆ,” ಎಂದಿದ್ದಾರೆ.
https://twitter.com/ANI/status/1636548474098311172?ref_src=twsrc%5Etfw%7Ctwcamp%5Etweetembed%7Ctwterm%5E1636548474098311172%7Ctwgr%5Ef7434f02350f86427650ec006a0550c611804b41%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-utter-lawlessness-in-ups-ghaziabad-as-group-of-hooligans-perform-car-stunts-halt-traffic
https://twitter.com/DelhiPolice/status/1636290419066814464?ref_src=twsrc%5Etfw%7Ctwcamp%5Etweetembed%7Ctwterm%5E1636290419066814464%7Ctwgr%5Ef7434f02350f86427650ec006a0550c611804b41%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-utter-lawlessness-in-ups-ghaziabad-as-group-of-hooligans-perform-car-stunts-halt-traffic