ಬಾಲಿವುಡ್​ ಹಾಡಿಗೆ ಚೀನಾದ ಪುಟ್ಟ ಬಾಲಕನಿಂದ ಡಾನ್ಸ್​: ಮೆಚ್ಚುಗೆಗಳ ಮಹಾಪೂರ

ಬಾಲಿವುಡ್ ಹಾಡುಗಳು ಮತ್ತು ಚಲನಚಿತ್ರಗಳು ಪ್ರಪಂಚದಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿವೆ. ಪ್ರಸಿದ್ಧ ಬಾಲಿವುಡ್ ಹಾಡುಗಳ ಹುಕ್ ಸ್ಟೆಪ್‌ಗೆ ವಿದೇಶಿಗರು ಸ್ಟೆಪ್​ ಹಾಕುವುದನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ಇತ್ತೀಚೆಗೆ, ಚೀನಾದ ಪುಟಾಣಿ ಬಾಲಕನೊಬ್ಬನ ಅಂತಹ ಒಂದು ವಿಡಿಯೋ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ, ಚೀನಾದ ಹುಡುಗನೊಬ್ಬ ‘ಮೊಹಬ್ಬತೇನ್’ ಚಿತ್ರದ ಜನಪ್ರಿಯ ಗೀತೆ ‘ಆಂಖೇನ್ ಖುಲಿ ಹೋ ಯಾ ಹೋ ಬ್ಯಾಂಡ್’ಗೆ ನೃತ್ಯ ಮಾಡುವುದನ್ನು ಕಾಣಬಹುದು.

ವಿಡಿಯೋದಲ್ಲಿ, ಈತ ಕಪ್ಪು ಬಟ್ಟೆಯನ್ನು ಧರಿಸಿ ತನ್ನ ಕ್ಯಾಮೆರಾವನ್ನು ಸ್ವತಃ ಆನ್ ಮಾಡಿ ಶಾರುಖ್ ಖಾನ್ ಒಳಗೊಂಡ ಜನಪ್ರಿಯ ಹಾಡಿಗೆ ನೃತ್ಯ ಮಾಡಲು ಕನ್ನಡಿಯ ಮುಂದೆ ನಿಂತಿರುವುದನ್ನು ನೋಡಬಹುದು. “ಹೊಸ ವರ್ಷದ ಶುಭಾಶಯಗಳು” ಎಂಬ ಶೀರ್ಷಿಕೆಯೊಂದಿಗೆ ಹಾಡಿಗೆ ಸ್ಟೆಪ್​ ಹಾಕಿದ್ದಾನೆ.

ಪೋಸ್ಟ್ ಮಾಡಿದ ನಂತರ, ವಿಡಿಯೋ 8 ಮಿಲಿಯನ್ ವೀಕ್ಷಣೆಗಳನ್ನು ಮತ್ತು 930K ಗಿಂತ ಹೆಚ್ಚು ಇಷ್ಟಗಳನ್ನು ಸ್ವೀಕರಿಸಿದೆ. ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಈ ವಿಡಿಯೋಗೆ ಸಹಸ್ರಾರು ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

https://youtu.be/0_QQ7d_dIig

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read