ಸಾಮಾಜಿಕ ಜಾಲತಾಣವು ಅಚ್ಚರಿಯ ವಿಡಿಯೋಗಳ ಮೂಲಕ ಸದಾ ನಮ್ಮನ್ನು ಪುಳಕಗೊಳಿಸುತ್ತಲೇ ಇರುತ್ತದೆ. ಕಡಲ ತೀರದಲ್ಲಿ ಕುಳಿತು ಸಮುದ್ರದ ಅಲೆಗಳ ಏರಿಳಿತಗಳ ಜೊತೆಗಿನ ಜೂಟಾಟವನ್ನು ಎಂಜಾಯ್ ಮಾಡುವ ಅನೇಕ ವಿಡಿಯೋ ಕ್ಲಿಪ್‌ಗಳನ್ನು ನೀವು ನೋಡಿಯೇ ಇರುತ್ತೀರಿ. ಆದರೆ ಖುದ್ದು ತಮ್ಮದೇ ಜೀವವನ್ನು ರಿಸ್ಕ್‌ನಲ್ಲಿಟ್ಟು ಇಂಥ ಮೋಜು ಪಡೆಯಲು ಮುಂದಾದರೆ ಹೇಗೆ?
ವವ್ ಟೆರ‍್ರಿಫೈಯಿಂಗ್ ಹೆಸರಿನ ಹ್ಯಾಂಡಲ್ ಮೂಲಕ ಟ್ವಿಟರ್‌ನಲ್ಲಿ ಶೇರ್ ಮಾಡಲಾದ ಈ ವಿಡಯೋದಲ್ಲಿ, ಹಡಗುಗಟ್ಟೆಯ ಮೇಲೆ ನಿಂತ ವ್ಯಕ್ತಿಯೊಬ್ಬ ಜೋರಾಗಿ ಏರಿಳಿಯುತ್ತಿರುವ ಹಡಗುಗಳನ್ನು ವೀಕ್ಷಿಸುತ್ತಿದ್ದು, ಹಡಗೊಂದು ಮುಂದೆ ಸಾಗುತ್ತಲೇ ಅಲೆಗಳ ಅಬ್ಬರ ಇನ್ನೂ ಜಾರಾಗುವುದನ್ನು ನೋಡಬಹುದಾಗಿದೆ.
ಆದರೆ ಇಷ್ಟೆಲ್ಲಾ ಆದರೂ ಆ ವ್ಯಕ್ತಿ ಅಲ್ಲೇ ನಿಂತಿದ್ದು, ಕೊನೆಯಲ್ಲಿ ಅಲೆಯ ಹೊಡೆತ ಹಡಗುಗಟ್ಟೆಗೆ ಬಡಿಯುತ್ತಲೇ ಅಲ್ಲಿಂದ ಹಿಂದಕ್ಕೆ ಓಡಿ ಬರುತ್ತಿದ್ದಾನೆ.
“ಸಾಗರದ ಅಲೆಗಳ ಶಕ್ತಿ ಏನೆಂದು ತಿಳಿಯುವ ಆಸೆ ನಿಮಗಿದ್ದರೆ, ಇದಕ್ಕೆಂದು ಸುರಕ್ಷಿತವಾದ ಅನೇಕ ಮಾರ್ಗಗಳಿವೆ. ಸುರಕ್ಷಿತವಾದ ಅಂತರ ಕಾಪಾಡಿಕೊಂಡು ಅಲೆಗಳನ್ನು ದೂರದಿಂದಲೇ ವೀಕ್ಷಿಸುವ ಆಯ್ಕೆಯೂ ನಿಮ್ಮ ಮುಂದೆ ಇದೆ. ಯಾವಾಗಲೂ ನಿಮ್ಮ ಸುರಕ್ಷತೆಯನ್ನು ಮೊದಲ ಆದ್ಯತೆಯನ್ನಾಗಿಸಿಕೊಂಡು ಯಾವುದೇ ಸಮುದ್ರ ಅಥವಾ ಜಲಾಗರದ ಬಳಿ ತೆಗೆದುಕೊಳ್ಳಬೇಕಾದ ಸಕಲ ಮುನ್ನೆಚ್ಚರಿಕೆಗಳನ್ನೂ ಪಾಲಿಸಿ,” ಎಂದು ನೆಟ್ಟಿಗರೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
https://twitter.com/WowTerrifying/status/1639086336664563713?ref_src=twsrc%5Etfw%7Ctwcamp%5Etweetembed%7Ctwterm%5E1639086336664563713%7Ctwgr%5E16f3bb49094704b3656ac57e1a0b26907c3533c1%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-viral-video-of-a-man-saving-himself-from-sea-waves-crashing-on-him-7385227.html
https://twitter.com/WowTerrifying/status/1639086336664563713?ref_src=twsrc%5Etfw%7Ctwcamp%5Etweetembed%7Ctwterm%5E1639088816811311104%7Ctwgr%5E16f3bb49094704b3656ac57e1a0b26907c3533c1%7Ctwcon%5Es2_&ref_url=https%3A%2F%2Fwww.news18.com%2Fbuzz%2Fwatch-viral-video-of-a-man-saving-himself-from-sea-waves-crashing-on-him-7385227.html
https://twitter.com/WowTerrifying/status/1631612522242482178?ref_src=twsrc%5Etfw%7Ctwcamp%5Etweetembed%7Ctwterm%5E1631612522242482178%7Ctwgr%5E16f3bb49094704b3656ac57e1a0b26907c3533c1%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-viral-video-of-a-man-saving-himself-from-sea-waves-crashing-on-him-7385227.html