ವಿಯಟ್ನಾಂ: ವಿಯಟ್ನಾಂ ಫುಟ್ಬಾಲ್ ಪಂದ್ಯದ ವೇಳೆ ಒಂದು ಅವಘಡ ಸಂಭವಿಸಿದೆ. ಪಂದ್ಯದಲ್ಲಿ ಸ್ಕೋರ್ ಮಾಡಿದ ನಂತರ ವಿಯೆಟೆಲ್ ಎಫ್‌ಸಿಯ ಟ್ರಾನ್ ಹಾಂಗ್ ಕೀನ್ ಒಂದು ಗೋಲು ಗಳಿಸಿದರು.
ಇದರ ಖುಷಿಯಿಂದ ಅವರು ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮಾಡಿದಂತೆ ಆ್ಯಕ್ಷನ್ ಮಾಡಲು ಹೋಗಿದ್ದೇ ದೊಡ್ಡ ತಪ್ಪಾಗಿದ್ದು, ಈಗ ಆಸ್ಪತ್ರೆಗೆ ದಾಖಲಾಗುವಂತಾಗಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ಅವರು ಗೆಲುವಿನ ಸಂದರ್ಭದಲ್ಲಿ ಒಂದು ರೀತಿಯ ಗೆಸ್ಚರ್ ಮಾಡುತ್ತಾರೆ. ಅವರಂತೆ ಮಾಡಲು ಟ್ರಾನ್ ಹಾಂಗ್ ಕೀನ್ ಟಚ್‌ಲೈನ್‌ಗೆ ಓಡಿಹೋದಾಗ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿದೆ. ಇದರಿಂದ ವಿಪರೀತ ನೋವು ಉಂಟಾಗಿ ನಡೆಯಲು ಸಾಧ್ಯವಾಗಲಿಲ್ಲ
ಆರಂಭದಲ್ಲಿ ಸಹ ಆಟಗಾರರಿಂದ ಆರಂಭಿಕ ಚಿಕಿತ್ಸೆಯನ್ನು ಪಡೆದ ನಂತರ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ತೀವ್ರ ನೋವಿನಿಂದ ಬಳಲುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರ ಫ್ಯಾನ್ಸ್ ಆತಂಕಕ್ಕೀಡಾಗಿದ್ದು, ಕ್ರೀಡಾಪಟುವಿನ ಶೀಘ್ರ ಚೇತರಿಕೆಗೆ ಹಾರೈಸುತ್ತಿದ್ದಾರೆ.
https://twitter.com/yenisafakspor/status/1638851895249993729?ref_src=twsrc%5Etfw%7Ctwcamp%5Etweetembed%7Ctwterm%5E1638851895249993729%7Ctwgr%5E9876cd11e8b21505047fb02d27d99243eb58438d%7Ctwcon%5Es1_&ref_url=https%3A%2F%2Findianexpress.com%2Farticle%2Fsports%2Ffootball%2Fwatch-vietnamese-footballer-ends-up-in-hospital-after-trying-to-imitate-cristiano-ronaldos-siiuuu-celebration-8517965%2F%3Futm_source%3Dmsnutm_medium%3DReferral