WATCH VIDEO : ಗಾಝಾ ಶಾಲೆಯ ಮೇಲೆ ಇಸ್ರೇಲ್ ದಾಳಿ , ಫುಟ್ಬಾಲ್ ಆಡುತ್ತಿದ್ದ 25 ಫೆಲೆಸ್ತೀನಿಯರು ಸಾವು.!

ಗಾಝಾ : ದಕ್ಷಿಣ ಗಾಝಾ ಪಟ್ಟಿಯ ಖಾನ್ ಯೂನಿಸ್ ನಗರದ ಶಾಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 25 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ಮೂಲಗಳು ತಿಳಿಸಿವೆ.

ಖಾನ್ ಯೂನಿಸ್ ಪೂರ್ವದಲ್ಲಿರುವ ಅಬಸಾನ್ ಅಲ್-ಕಬೀರಾ ಪಟ್ಟಣದಲ್ಲಿ ನೂರಾರು ಸ್ಥಳಾಂತರಗೊಂಡ ಜನರನ್ನು ಹೊಂದಿರುವ ಅಲ್-ಅವ್ದಾ ಶಾಲೆಯ ಗೇಟ್ ಅನ್ನು ಇಸ್ರೇಲ್ ವಿಮಾನಗಳು ಕನಿಷ್ಠ ಒಂದು ಕ್ಷಿಪಣಿಯನ್ನು ಬಳಸಿ ಗುರಿಯಾಗಿಸಿಕೊಂಡಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ವಿಡಿಯೋದಲ್ಲಿ ಅಲ್ ಜಜೀರಾ ಪಡೆದ ಶಾಲೆಯ ಕಟ್ಟಡದ ಅಂಗಳದಲ್ಲಿ ಯುವ ಫೆಲೆಸ್ತೀನಿಯರು ಫುಟ್ಬಾಲ್ ಆಡುತ್ತಿರುವುದನ್ನು ನೋಡಬಹುದಾಗಿದೆ. ಇದಕ್ಕಿದ್ದಂತೆ ಭಾರಿ ದೊಡ್ಡ ಸ್ಫೋಟದ ಶಬ್ದ ಕೇಳಿಸುತ್ತದೆ, ಜನರು ತಮ್ಮ ಜೀವ ಉಳಿಸಿಕೊಳ್ಳಲು ಓಡುತ್ತಾರೆ. ಭೀಕರ ಘಟನೆಯ ದೃಶ್ಯಗಳು ವೈರಲ್ ಆಗಿದೆ.

https://twitter.com/i/status/1810881371797344333

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read