ಪತ್ರಕರ್ತರ ಆನ್​ಲೈನ್​ ಮೀಟಿಂಗ್​ನಲ್ಲಿ ಬಿಯರ್​ ಕ್ಯಾನ್ಸ್​…!

ನವದೆಹಲಿ: ವರ್ಚುವಲ್​ ಮೀಟಿಂಗ್​ ಸಂದರ್ಭಗಳಲ್ಲಿ ಹಾಗೂ ಆನ್​ಲೈನ್​ ಸಭೆಗಳು, ತರಗತಿಗಳ ಸಂದರ್ಭದಲ್ಲಿ ನಡೆದ ಹಲವಾರು ಆಸಕ್ತಿಕರ ವಿಷಯಗಳ ಬಗ್ಗೆ ಇದಾಗಲೇ ಸಾಕಷ್ಟು ವಿಡಿಯೋಗಳು ವೈರಲ್​ ಆಗಿವೆ. ಅದರಲ್ಲಿಯೂ ಕೋವಿಡ್​ ಸಂದರ್ಭದಲ್ಲಿ ಆಗಿರುವ ಫಜೀತಿಗಳು ಅಷ್ಟಿಷ್ಟಲ್ಲ.

ಈಗ ಅಂಥದ್ದೇ ಇನ್ನೊಂದು ವಿಡಿಯೋ ವೈರಲ್​ ಆಗಿದೆ. ಲಾಲನ್‌ಟಾಪ್ ಸಂಪಾದಕ ಸೌರಭ್ ದ್ವಿವೇದಿ ಅವರು ತಮ್ಮ ಸಂಪಾದಕೀಯ ಸಿಬ್ಬಂದಿಯೊಂದಿಗೆ ಸಂಭಾಷಣೆಯಲ್ಲಿದ್ದಾಗ ನಡೆದ ಘಟನೆ ಇದಾಗಿದೆ.

ಸಭೆಯಲ್ಲಿ ಪತ್ರಕರ್ತ ಗೌರವ್ ಎಂಬುವವರೂ ಇದ್ದರು. ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಅವರ ಹಿನ್ನೆಲೆಯಲ್ಲಿ ನಡೆದ ಘಟನೆಯಿಂದ ಈ ವಿಡಿಯೋ ಸಾಕಷ್ಟು ಸುದ್ದಿ ಮಾಡುತ್ತಿದೆ.

ಅದೇನೆಂದರೆ, ಮೀಟಿಂಗ್​ ನಡೆಯುತ್ತಿರುವ ವೇಳೆ, ಗೌರವ್ ಅವರ ಪರದೆಯು ಹಿಂದೆ ಹಲವಾರು ಬಿಯರ್ ಕ್ಯಾನ್‌ಗಳನ್ನು ಹಿಡಿದಿರುವ ವ್ಯಕ್ತಿ ಕಂಡುಬಂದಿದ್ದಾನೆ. ಅವುಗಳನ್ನು ಫ್ರಿಜ್​ನಲ್ಲಿ ಇಡಲು ಡೋರ್​ ಓಪನ್​ ಮಾಡಿರುವುದನ್ನು ನೋಡಬಹುದು. ಇದು ಬಹಳ ವೈರಲ್​ ಆಗಿದ್ದು, ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.

https://twitter.com/FabulasGuy/status/1647483413144956928?ref_src=twsrc%5Etfw%7Ctwcamp%5Etweetembed%7Ctwterm%5E1647483413144956928%7Ctwgr%5Eb84de2c4317c93156dc757604a510c4f7ac7169a%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-video-call-of-the-lallantop-goes-viral-with-a-beer-punch-netizens-react-with-memes

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read