ಶಾಲೆಗೆ ನಾಯಿ ಕರೆತಂದ ವಿದ್ಯಾರ್ಥಿ….! ಮುಂದೇನಾಯ್ತು ನೋಡಿ

ನ್ಯೂಯಾರ್ಕ್​: ಸಾಕುಪ್ರಾಣಿಗಳನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಸಾಕುಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುತ್ತಾರೆ. ಇದೇ ಕಾರಣಕ್ಕೆ ಅವರು, ಪ್ರೀತಿ ಮತ್ತು ವಾತ್ಸಲ್ಯದಿಂದಾಗಿ ಕೆಲಸಕ್ಕೆ ಅಥವಾ ಕಾಲೇಜಿಗೆ ಹೋಗುವಾಗ ಅವುಗಳನ್ನು ಬಿಟ್ಟು ಹೋಗುವಾಗ ನೋವು ಉಂಟಾಗುವುದು ಮಾಮೂಲು.

ನಮ್ಮ ಕೆಲಸದ ಸ್ಥಳ, ಕಾಲೇಜು ಅಥವಾ ನಾವು ದಿನನಿತ್ಯದ ಯಾವುದೇ ಸ್ಥಳಕ್ಕೆ ನಮ್ಮ ಸಾಕುಪ್ರಾಣಿಗಳನ್ನು ಕರೆತರುವ ಬಗ್ಗೆ ನಾವೆಲ್ಲರೂ ಯೋಚಿಸಿರುತ್ತೇವೆ. ಆದರೆ ಅದು ಸಾಧ್ಯವಾಗುವುದಿಲ್ಲ. ಆದರೆ ಅಮೆರಿಕದಲ್ಲಿ ವಿದ್ಯಾರ್ಥಿಯೊಬ್ಬ ಶಾಲೆಗೆ ನಾಯಿಯನ್ನು ಕರೆತಂದು ಹಂಗಾಮ ಸೃಷ್ಟಿಸಿರುವುದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ವಿದ್ಯಾರ್ಥಿ ನಾಯಿಯೊಂದಿಗೆ ಬಂದಿರುತ್ತಾನೆ. ಅದನ್ನು ಬ್ಯಾಗ್​ನಲ್ಲಿ ಹಾಕಿಕೊಂಡಿರುತ್ತಾನೆ. ಅವನ ಪ್ರಾಧ್ಯಾಪಕರಿಗೆ ಸಂದೇಹ ಬಂದರೂ ವಿದ್ಯಾರ್ಥಿ ಏನೂ ಆಗಿಲ್ಲ ಎನ್ನುವಂತೆ ಇರುತ್ತಾನೆ. ನಂತರ ನಿಧಾನಕ್ಕೆ ಬ್ಯಾಗ್​ನಿಂದ ನಾಯಿಯನ್ನು ಮೇಜಿನ ಕೆಳಗೆ ಇಡುತ್ತಾನೆ.

ಆಗ ನಾಯಿ ಶಬ್ದ ಮಾಡಿದ್ದರಿಂದ ಎಲ್ಲರಿಗೂ ಇದು ತಿಳಿಯುತ್ತದೆ. ವಿದ್ಯಾರ್ಥಿಯ ಈ ‘ಗುಟ್ಟಿನ’ ವರ್ತನೆಯ ಬಗ್ಗೆ ಪ್ರೊಫೆಸರ್ ಸೇರಿದಂತೆ ತರಗತಿಯಲ್ಲಿ ಎಲ್ಲರೂ ನಗುವುದನ್ನು ವಿಡಿಯೋದಲ್ಲಿ ನೋಡಬಹುದು.

https://www.youtube.com/watch?v=HCoz9dK3xJo&feature=youtu.be

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read