ಯಾವುದೇ ಪಂದ್ಯಗಳ ನಡುವೆ ಅಂಪೈರ್ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಇವರು ನೀಡುವ ತೀರ್ಪೇ ಅಂತಿಮವಾಗುವ ಕಾರಣ ಆಟದತ್ತ ಅವರು ಸತತವಾಗಿ ನಿಗಾ ವಹಿಸಬೇಕಾಗುತ್ತದೆ.
ಆದರೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಅಂಪೈರ್ ಎತ್ತಲೋ ನೋಡುತ್ತಾ ನಿಂತಿದ್ದಾರೆ. ಈ ವಿಡಿಯೋ ಈಗ ಕ್ರೀಡಾ ಪ್ರೇಮಿಗಳಿಂದ ಟ್ರೋಲ್ ಗೆ ಒಳಗಾಗಿದೆ.
ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ದಕ್ಷಿಣ ಆಫ್ರಿಕಾದ ವೇಗಿ ನೊಕಿಯ, ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ ಜೇಸನ್ ರಾಯ್ ಅವರಿಗೆ ಬೌಲ್ ಮಾಡುವಾಗ ಲೆಗ್ ಅಂಪೈರ್ ಮರಾಯಸ್ ಎರಾಸ್ಮಸ್ ಬೇರೆ ಕಡೆ ನೋಡುತ್ತಾ ನಿಂತಿದ್ದರು. ಈ ವಿಡಿಯೋ ಶೇರ್ ಮಾಡಿ ಕ್ರೀಡಾ ಪ್ರೇಮಿಗಳು ಟ್ರೋಲ್ ಮಾಡುತ್ತಿದ್ದಾರೆ.
https://twitter.com/GemsOfCricket/status/1619179279513980929?ref_src=twsrc%5Etfw%7Ctwcamp%5Etweetembed%7Ctwterm%5E1619179279513980929%7Ctwgr%5Edaefa9408659fbb84749b3bab0dd3875817170d0%7Ctwcon%5Es1_&ref_url=https%3A%2F%2Fwww.hindustantimes.com%2Fcricket%2Fwatch-umpire-marais-erasmus-gets-distracted-misses-entire-delivery-during-sa-vs-eng-1st-odi-twitter-goes-berserk-101674883938419.html