ʼಮಾನವೀಯತೆʼ ಇನ್ನೂ ಜೀವಂತವಿದೆ ಎಂಬುದನ್ನು ನಿರೂಪಿಸುತ್ತೆ ಈ ವಿಡಿಯೋ..!

ಶಾಪಿಂಗ್​ ಮಾಲ್​ಗಳಿಂದ ಹಿಡಿದು ಮೆಟ್ರೋ ನಿಲ್ದಾಣಗಳವರೆಗೂ ಎಸ್ಕಲೇಟರ್​ಗಳು ಈಗ ಸಾಮಾನ್ಯವಾಗಿದೆ. ಆದರೆ ಅನೇಕರು ಇಂದಿಗೂ ಎಸ್ಕಲೇಟರ್​ಗಳನ್ನು ಬಳಕೆ ಮಾಡಲು ಹೆದರುತ್ತಾರೆ.

ಈ ನಡುವೆ ಸೋಶಿಯಲ್​ ಮೀಡಿಯಾದಲ್ಲಿ ಲುಕಾ ಲೊಬುನೊ ಎಂಬವರು ಹೊಸದೊಂದು ಪ್ರಯೋಗದ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಇದು ಎಸ್ಕಲೇಟರ್​​​ ಹತ್ತಲು ಹೆಣಗಾಡುತ್ತಿರುವ ಅಪರಿಚಿತರಿಗೆ ವ್ಯಕ್ತಿಯೊಬ್ಬ ಸಹಾಯ ಮಾಡುತ್ತಿರುವ ದೃಶ್ಯವನ್ನು ಹೊಂದಿದೆ.

ಈ ವಿಡಿಯೋದಲ್ಲಿ ನಟ ಲುಕಾ ಲೊಬುನೊ ಎಂಬವರು ಎಸ್ಕಲೇಟರ್​​ನಿಂದ ಇಳಿಯಲು ಹೆಣಗಾಡುತ್ತಿರುವಂತೆ ನಟಿಸುತ್ತಿರುತ್ತಾರೆ. ಅನೇಕರು ಇದನ್ನು ನೋಡಿ ಸಹಾಯ ಮಾಡುವ ಗೋಜಿಗೆ ಹೋಗದೇ ಅವರಷ್ಟಕ್ಕೆ ಅವರು ಇರುತ್ತಾರೆ. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ನಟನಿಗೆ ಎಸ್ಕಲೇಟರ್​ನಿಂದ ಇಳಿಯಲು ಸಹಾಯ ಮಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಸದ್ಯ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದು, ಈ ವಿಡಿಯೋಗೆ ಕಮೆಂಟ್​ ಮಾಡಿದ ಓರ್ವ ವ್ಯಕ್ತಿ, ಈ ವಿಡಿಯೋ ನನ್ನ ಕಣ್ಣಲ್ಲಿ ನೀರು ತರಿಸಿತು. ಯುವಕನ ದಯಾಗುಣ ನನಗೆ ಇಷ್ಟವಾಯ್ತು ಎಂದು ಬರೆದಿದ್ದಾರೆ. ಅಗತ್ಯ ಇರುವವರಿಗೆ ಯಾರೂ ಸಹಾಯ ಮಾಡಲು ಮುಂದಾಗೋದಿಲ್ಲ ಕೇವಲ ನೋಡುತ್ತಾ ಇದ್ದು ಬಿಡುತ್ತಾರೆ. ಆದರೆ ಈ ವ್ಯಕ್ತಿ ತನ್ನ ಕುಟುಂಬಸ್ಥರ ಜೊತೆಯಲ್ಲಿ ಈತನಿಗೂ ಸಹಾಯ ಮಾಡಿದ್ದು ಖುಷಿಯಾಯ್ತು ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read