Video | ಮದುವೆಗೆ ಬಂದ ಸ್ನೇಹಿತರಿಂದ ಅದ್ಭುತ ನೃತ್ಯ; ಸಂತಸದಿಂದ ಕಣ್ಣೀರಾದ ವಧು

ಮದುವೆ ಮನೆಯೆಂದರೆ ಈಗ ಅಲ್ಲಿ ನೃತ್ಯ, ಸಂಗೀತಗಳದ್ದೇ ಕಾರುಬಾರು. ಅದರ ಕೆಲವು ವಿಡಿಯೋಗಳೂ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಮೆಹಂದಿ ಸಮಾರಂಭದಲ್ಲಿ ಆತ್ಮೀಯ ಸ್ನೇಹಿತರು ತನಗಾಗಿ ಅಚ್ಚರಿಯ ನೃತ್ಯ ಪ್ರದರ್ಶನವನ್ನು ನೀಡಿದಾಗ ಸಂತೋಷದ ಕಣ್ಣೀರು ಸುರಿಸಿದ ವಿಡಿಯೋ ಇದಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ದೀಪೇಶ್ ಮೆಹ್ತಾ ಅವರು ಪೋಸ್ಟ್ ಮಾಡಿದ್ದಾರೆ.

ಇದರಲ್ಲಿ ವಧುವಿನ ಇಬ್ಬರು ಸ್ನೇಹಿತರು ‘ಹೇ ಬೇಬಿ’ ಚಿತ್ರದ ‘ಮಸ್ತ್ ಕಲಂದರ್’ ಹಾಡಿನ ಟ್ಯೂನ್‌ಗೆ ನೃತ್ಯ ಸಂಯೋಜನೆಯ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇವರು ನೃತ್ಯ ಮಾಡುವಾಗ ಇನ್ನಷ್ಟು ಸ್ನೇಹಿತರು ಸೇರಿಕೊಳ್ಳುತ್ತಾರೆ.

ಆಗ ವಧು ತನ್ನ ಆತ್ಮೀಯ ಸ್ನೇಹಿತರನ್ನು ನೋಡಿ ಸಂತೋಷದಿಂದ ಕಣ್ಣೀರು ಹಾಕುವುದನ್ನು ಕಾಣಬಹುದು. ಇದನ್ನು ಹಲವು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇದ್ದರೆ ಇಂಥ ಸ್ನೇಹಿತರು ಇರಬೇಕು, ಇಂಥವರಿಂದ ಮದುವೆಗೆ ಇನ್ನಷ್ಟು ಕಳೆ ಎಂದು ಕೆಲವರು ಕಮೆಂಟ್​ ಮೂಲಕ ತಿಳಿಸಿದ್ದಾರೆ.

https://www.youtube.com/watch?v=7SvytZdH_N0&feature=youtu.be

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read