ಸೋರುತ್ತಿರುವ ಶಾಲೆಯಲ್ಲಿ ಛತ್ರಿ ಹಿಡಿದು ಪಾಠ ಕೇಳಿದ ವಿದ್ಯಾರ್ಥಿಗಳು; ವಿಡಿಯೋ ‘ವೈರಲ್’

ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು ಎಲ್ಲರಿಗೂ ಗೊತ್ತಿರುವ ಸಂಗತಿ. ಶಿಥಿಲಾವಸ್ತೆ ತಲುಪಿದರೂ ಸಹ ಸಕಾಲಕ್ಕೆ ಅದನ್ನು ರಿಪೇರಿ ಮಾಡಿಸದೆ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಾರೆ. ರಿಪೇರಿಗಾಗಿ ಹಣ ಬಿಡುಗಡೆ ಮಾಡಿದಂತೆ ಮಾಡಿ ಅದನ್ನು ನುಂಗಿ ಹಾಕುವ ಕೆಲಸವೂ ನಡೆಯುತ್ತದೆ.

ಹೀಗೆ ಶಿಥಿಲಾವಸ್ತೆ ತಲುಪಿರುವ ಹಲವು ಶಾಲೆಗಳ ಚಿತ್ರಣ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದೀಗ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಶಾದೋಲ್ ಜಿಲ್ಲೆಯ ಬುರ್ಸಿ ಗ್ರಾಮದಲ್ಲಿರುವ ಶಾಲೆ ಸಂಪೂರ್ಣವಾಗಿ ಶಿಥಿಲಾವಸ್ತೆ ತಲುಪಿದ್ದು ಮಾಳಿಗೆ ಸೋರುತ್ತಿದೆ.

ಇದರ ನಡುವೆ ಮಳೆ ಕೂಡ ಸುರಿಯುತ್ತಿದ್ದು, ವಿದ್ಯಾರ್ಥಿಗಳು ಛತ್ರಿ ಹಿಡಿದುಕೊಂಡೇ ಶಾಲಾ ಕೊಠಡಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಜಿಲ್ಲಾಡಳಿತದ ಗಮನಕ್ಕೂ ಬರುತ್ತಿದ್ದಂತೆ ಇದರ ದುರಸ್ತಿಗೆ ಮುಂದಾಗಿದ್ದಾರೆ. ಜೊತೆಗೆ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಸಹ ಘೋಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read