ಕಬ್ಬಿಣದ ರಾಡುಗಳೂ, ಹಾಕಿ ಸ್ಟಿಕ್‌ಗಳು ಹಾಗೂ ಚೂರಿಗಳನ್ನು ಹಿಡಿದ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ಡೆಹ್ರಾಡೂನ್‌ನಲ್ಲಿ ಜರುಗಿದೆ.
ಪತ್ರಕರ್ತ ಅಜಿತ್ ಸಿಂಗ್ ರಾತಿ ಟ್ವಿಟರ್‌ನಲ್ಲಿ ಘಟನೆಯ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. “ತೆರೆದ ಬೀದಿಗಳಲ್ಲಿ ವಿದ್ಯಾರ್ಥಿಗಳ ಸಮೂಹಗಳ ನಡುವೆ ಕಚ್ಚಾಟ ನಡೆದಿದ್ದು, ವಾಹನಗಳಿಗೆ ಹಾನಿ ಮಾಡುತ್ತಿದ್ದಾರೆ. ನಗರದ ವಾತಾವರಣವನ್ನು ಹಾಳು ಮಾಡುತ್ತಿರುವ ಕಿಡಿಗೇಡಿಗಳು ಯಾರು,” ಎಂದು ಅಜಿತ್ ಸಿಂಗ್ ಬರೆದಿದ್ದಾರೆ.
ಗುರುವಾರ ರಾತ್ರಿ ಘಟಿಸಿದ ಈ ಘಟನೆ ಸಂಬಂಧ ಪ್ರತಿಷ್ಠಿತ ವಿವಿಯೊಂದರ ಎಂಟು ವಿದ್ಯಾರ್ಥಿಗಳನ್ನು ಡೆಹ್ರಾಡೂನ್‌ನ ಕ್ಲೆಮೆಂಟ್ ಟೌನ್ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿಗಳ ಈ ವರ್ತನೆಗೆ ಅವರ ಕಾಲೇಜುಗಳ ಆಡಳಿತ ಮಂಡಳಿಗಳು ಉತ್ತರಿಸಬೇಕಿದೆ ಎಂದು ಡೆಹ್ರಾಡೂನ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಲೀಪ್ ಸಿಂಗ್ ಕುನ್ವರ್, ಪ್ರಕರಣವನ್ನು ಸರಿಯಾಗಿ ನಿಭಾಯಿಸದೇ ಇದ್ದ ಕಾರಣ ಕ್ಲೆಮೆಂಟ್ ಟೌನ್ ಠಾಣಾಧಿಕಾರಿ ಹಾಗೂ ಒಬ್ಬ ಸಬ್ ಇನ್ಸ್‌ಪೆಕ್ಟರ್‌ನನ್ನು ಅಮಾತುಗೊಳಿಸಿದ್ದಾರೆ.
https://twitter.com/AjitSinghRathi/status/1646454881765425152?ref_src=twsrc%5Etfw%7Ctwcamp%5Etweetembed%7Ctwterm%5E1646454881765425152%7Ctwgr%5Efa6a23387f90f9fab1e6e97c9710da144f77f1eb%7Ctwcon%5Es1_&ref_url=https%3A%2F%2Fwww.freepressjournal.in%2Feducation%2Fwatch-students-groups-clashes-in-dehradun-with-iron-rods-and-knives