ಸಂಕಷ್ಟದಲ್ಲಿರುವ ಅಫ್ಘಾನಿಸ್ತಾನದಿಂದ ಭಾವಪೂರ್ವಕ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿಕ್ಕ ಹುಡುಗಿಯೊಬ್ಬಳು ತನ್ನ ಕುಟುಂಬವನ್ನು ಪೋಷಿಸಲು ಪೆನ್ನುಗಳನ್ನು ಮಾರುತ್ತಿರುವುದನ್ನು ತೋರಿಸುತ್ತದೆ. ಈ ವಿಡಿಯೋವನ್ನು ವಕೀಲರಾದ ನಹಿರಾ ಜಿಯಾಯೆ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಬಾಲಕಿಯನ್ನು ಜೈನಾಬ್ ಎಂದು ಗುರುತಿಸಲಾಗಿದೆ. ಒಬ್ಬ ಮಹಿಳೆ ಪೆನ್ನಿನ ಬೆಲೆಯನ್ನು ಕೇಳುತ್ತಾಳೆ. ಆಗ ಬಾಲಕಿ 20 ಸೆಂಟ್ಸ್ ಎಂದು ಹೇಳುತ್ತಾಳೆ. ಮಹಿಳೆಯು ಹುಡುಗಿಯ ಮುಖದಲ್ಲಿ ನಗು ತರಿಸುವ ಏನನ್ನಾದರೂ ಕೇಳುತ್ತಾಳೆ. ಅವಳು ಎಲ್ಲಾ ಪೆನ್ನುಗಳನ್ನು ಖರೀದಿಸಬಹುದೇ ಎಂದು ಕೇಳುತ್ತಾಳೆ. ಮಹಿಳೆ ಒಪ್ಪಿಕೊಂಡು ಹಣವನ್ನು ಪಾವತಿ ಸಂಪೂರ್ಣ ಹಣ ನೀಡುತ್ತಾಳೆ.
ಮಹಿಳೆ ಅವಳಿಗೆ ಒಂದೆರಡು ಹೆಚ್ಚು ಕರೆನ್ಸಿ ನೋಟುಗಳನ್ನು ಕೊಟ್ಟಾಗ ಬಾಲಕಿ, “ನೀವು ನನಗೆ ತುಂಬಾ ಪಾವತಿಸಿದ್ದೀರಿ” ಎಂದು ಹುಡುಗಿ ಹೇಳುತ್ತಾಳೆ. ಪರವಾಗಿಲ್ಲ, ಇಟ್ಟುಕೊ ಎಂದು ಮಹಿಳೆ ಹೇಳಿದಾಗ ಹುಡುಗಿಯ ಮುಖವು ಬೆಳಗುತ್ತದೆ. ಆಕೆ ನಗುಮೊಗದಿಂದ ಓಡಿ ಹೋಗುತ್ತಾಳೆ. ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್ ಮಾಡಿದ್ದು, ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ.
https://twitter.com/Nahiraziaye/status/1612904990783176704?ref_src=twsrc%5Etfw%7Ctwcamp%5Etweetembed%7Ctwterm%5E1612904990783176704%7Ctwgr%5E8362b6ae08b8dcccd8571e6be12fa57d72e46983%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-stranger-buys-all-pens-from-little-afghan-girl-internet-likes-her-kindness-3690106