Watch | ನೃತ್ಯದ ಮೂಲಕ ಮಂತ್ರಮುಗ್ಧಗೊಳಿಸುತ್ತಿರುವ ’ಶುಕ್ಲಾ ಸಿಸ್ಟರ್ಸ್’

“ಒಬ್ಬ ಅಥ್ಲೀಟ್‌ಗೆ ನೃತ್ಯ ಮಾಡಲು ಬರಬಹುದು. ಆದರೆ ಕಲಾವಿದನಿಗೆ ಮಾತ್ರವೇ ನೃತ್ಯಗಾರನಾಗಲು ಸಾಧ್ಯ,” ಎಂಬ ಮಾತಿಗೆ ತಕ್ಕಂತೆ ತಮ್ಮ ಅದ್ಭುತ ನೃತ್ಯದಿಂದ ನೆಟ್ಟಿಗರನ್ನು ಫಿದಾ ಮಾಡುತ್ತಿದ್ದಾರೆ ’ಶುಕ್ಲಾ ಸಹೋದರಿಯರು’.

ತಮ್ಮ ನೃತ್ಯ ಸಂಯೋಜನೆ ಹಾಗೂ ಅದ್ಭುತವಾದ ಹೊಂದಾಣಿಕೆಯ ಹೆಜ್ಜೆಗಳ ಮೂಲಕ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿರುವ ಈ ನಾಲ್ಕು ಸಹೋದರಿಯರ ವಿಡಿಯೋಗಳು ಇನ್‌ಸ್ಟಾಗ್ರಾಂನಲ್ಲಿ ಸಖತ್‌ ವೈರಲ್ ಆಗುತ್ತವೆ.

ಬಾಲಿವುಡ್‌ನ ಖ್ಯಾತ ಹಾಡುಗಳಿಗೆ ಸ್ಟೆಪ್ ಹಾಕುವ ಈ ಬಾಲೆಯರ ನೃತ್ಯದ ರಿದಂ ಅದ್ಯಾವ ಮಟ್ಟಿಗೆ ಇದೆ ಎಂದರೆ ಅವರೆಲ್ಲರೂ ಒಂದೇ ಥರ ಕಾಣುತ್ತಾರೆ ಎಂದು ನೆಟ್ಟಿಗರು ಹೌಹಾರುತ್ತಾರೆ. ಡ್ಯಾನ್ಸ್ ಮಾಡಲು ಆಸೆ ಪಡುವ ಹೆಣ್ಣುಮಕ್ಕಳು ವಿಡಿಯೋ ನೋಡಿದಾಗೆಲ್ಲಾ ತಾವೂ ಸಹ ಈ ಗುಂಪಿನ ಭಾಗವಾಗಿರಬೇಕನಿಸುತ್ತದಂತೆ.

ಸಾಂಪ್ರದಾಯಿಕ ಹಾಗೂ ಆಧುನಿಕ ಉಡುಗೆಗಳಲ್ಲೆಲ್ಲಾ ಮಿಂಚುವ ಶುಕ್ಲಾ ಸಹೋದರಿಯರು ಕುಣಿತಕ್ಕೆ ದೊಡ್ಡ ಹಿಂಬಾಲಕರ ಬಣವೇ ಇದೆ. ಇತ್ತೀಚಿನ ವಿಡಿಯೋಗಳಲ್ಲಿ ಇಬ್ಬರು ಹುಡುಗಿರುವ ಕಾಣುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತಿರಸಿರುವ ಶುಕ್ಲಾ ಸಹೋದರಿಯರು, “ಅವರಿಬ್ಬರು ಪರೀಕ್ಷೆಗೆ ತಯಾರಿ ನಡೆಸಿದ್ದಾರೆ,” ಎಂದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read