Video | ಉಜ್ಜಿಯಿನಿಯಲ್ಲಿ ಅಕ್ಷಯ್​ ಕುಮಾರ್​ ಕುಟುಂಬ ಪ್ರತ್ಯಕ್ಷ; ಸಾಥ್​ ಕೊಟ್ಟ ಶಿಖರ್ ಧವನ್​

ಬಾಲಿವುಡ್ ನಟ ಅಕ್ಷಯ್​ ಕುಮಾರ್​ ತಮ್ಮ 56ನೇ ಹುಟ್ಟುಹಬ್ಬದಂದು ಪ್ರ್ರಾರ್ಥನೆ ಸಲ್ಲಿಸಲು ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಕ್ಷಯ್​ ಕುಮಾರ್​ ಜೊತೆಯಲ್ಲಿ ಅವರ ಪುತ್ರ ಆರವ್​, ಸಹೋದರಿ ಅಲ್ಕಾ ಹಿರಾನಂದಿನಿ ಸೋದರ ಸೊಸೆ ಸಿಮಾರ್​ ಕೂಡ ಇರೋದನ್ನು ಕಾಣಬಹುದಾಗಿದೆ. ಇನ್ನೊಂದು ವಿಶೇಷ ಅಂದ್ರೆ ಕ್ರಿಕೆಟಿಗ ಶಿಖರ್​ ಧವನ್​ ಕೂಡ ಈ ಪೂಜೆಯಲ್ಲಿ ಭಾಗಿಯಾಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.

ಮಹಾಕಾಲ ಲೋಕ ಎಂದೂ ಕರೆಯಲ್ಪಡುವ ಉಜ್ಜಯಿನಿ ದೇವಸ್ಥಾನದ ನಂದಿ ಸಭಾಂಗಣದಲ್ಲಿ ಪ್ರಸಿದ್ಧ ಭಸ್ಮಾರತಿ ಸಮಯದಲ್ಲಿ ಅಕ್ಷಯ್​ ಕುಮಾರ್​ ಕುಟುಂಬ ಹಾಜರಿತ್ತು ಎನ್ನಲಾಗಿದೆ. ಮಹಾಕಾಲ ದೇಗುಲದಲ್ಲಿ ಬೆಳಗ್ಗೆ 4 ಗಂಟೆಗೆ ಭಸ್ಮಾರತಿ ಸಲ್ಲಿಸಲಾಗುತ್ತದೆ. ಈ ವಿಶೇಷ ಪೂಜೆ ಕಣ್ತುಂಬಿಕೊಳ್ಳುವ ಸಲುವಾಗಿ ಅಕ್ಷಯ್​ ಕುಮಾರ್​ ಕುಟುಂಬ ಬೆಳಗ್ಗೆ 2 ಗಂಟೆಗೆ ದೇವಸ್ಥಾನದಲ್ಲಿ ಹಾಜರಿತ್ತು.

ಇಡೀ ಹಾಲ್​ನ್ನು ಅಕ್ಷಯ್​ ಕುಮಾರ್​ ಕುಟುಂಬ ಬುಕ್​ ಮಾಡಿತ್ತು. ಇದೇ ವೇಳೆ ಅಕ್ಷಯ್​ ಕುಮಾರ್​ ಕುಟುಂಬ ಹಾಲ್​ನ ಮುಂಭಾಗದಲ್ಲಿ ಕುಳಿತಿದ್ದ ಶಿಖರ್​ ಧವನ್​ರನ್ನು ಗಮನಿಸಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಅಕ್ಷಯ್​ ಕುಮಾರ್ ಕೇಸರಿ ಬಣ್ಣದ ಶಾಲು ಹಾಗೂ ಪಂಚೆ ಧರಿಸಿರೋದನ್ನು ಕಾಣಬಹುದಾಗಿದೆ. ಅಕ್ಷಯ್​ ಕುಮಾರ್​​ ಕೊನೆಯದಾಗಿ 2021ರ ಅಕ್ಟೋಬರ್ ತಿಂಗಳಲ್ಲಿ ಈ ದೇಗುಲಕ್ಕೆ ಆಗಮಿಸಿದ್ದರು.

https://twitter.com/i/status/1700352788251787646

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read