ಕೊರೊನಾ ನಂತರ ದೇಶದಲ್ಲಿ ಹೃದಯಾಘಾತದಿಂದ ಸಾವಿನ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ. ದೇಶಾದ್ಯಂತ ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿದ್ದು ಮಧ್ಯಪ್ರದೇಶದ ಭೋಪಾಲ್‌ನಲ್ಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ.
ನೃತ್ಯ ಮಾಡುವಾಗ ಅಂಚೆ ಇಲಾಖೆಯ ಸಹಾಯಕ ನಿರ್ದೇಶಕರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾರ್ಚ್ 16 ರಂದು ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
ಅಂಚೆ ಇಲಾಖೆಯು ಭೋಪಾಲ್‌ನ ಮೇಜರ್ ಧ್ಯಾನಚಂದ್ ಹಾಕಿ ಕ್ರೀಡಾಂಗಣದಲ್ಲಿ ಮಾರ್ಚ್ 13 ರಿಂದ 17 ರವರೆಗೆ ಅಖಿಲ ಭಾರತ ಅಂಚೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿತ್ತು. ಅಂತಿಮ ಪಂದ್ಯವನ್ನು ಮಾರ್ಚ್ 17 ರಂದು ನಿಗದಿಪಡಿಸಲಾಗಿತ್ತು.
ಹಿಂದಿನ ದಿನ ಅಂದರೆ ಮಾರ್ಚ್ 16ರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭೋಪಾಲ್ ಪೋಸ್ಟಲ್ ಸರ್ಕಲ್ ಆಫೀಸ್ ನಲ್ಲಿ ಸಹಾಯಕ ನಿರ್ದೇಶಕರಾದ ಸುರೇಂದ್ರ ಕುಮಾರ್ ದೀಕ್ಷಿತ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಡ್ಯಾನ್ಸ್ ಮಾಡುತ್ತಿದ್ದರು.
ಡ್ಯಾನ್ಸ್ ಮಾಡುತ್ತಿದ್ದಾಗ ಹೃದಯಾಘಾತವಾಗಿ ಕುಸಿದು ಬಿದ್ದರು. ಸುತ್ತಮುತ್ತಲಿನ ಜನರು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು.
https://twitter.com/sirajnoorani/status/1637756456371130368?ref_src=twsrc%5Etfw%7Ctwcamp%5Etweetembed%7Ctwterm%5E1637756456371130368%7Ctwgr%5E37a1f1997e4725eb97427247f8b180faeedb98b2%7Ctwcon%5Es1_&ref_url=https%3A%2F%2Fwww.freepressjournal.in%2Findia%2Fwatch-senior-mp-govt-employee-suffers-massive-heart-attack-while-dancing-at-cultural-function-in-bhopal-dies