ಕೊಚ್ಚಿ: ಭಾರತೀಯ ಕೋಸ್ಟ್ ಗಾರ್ಡ್‌ಗೆ ಸೇರಿದ ಹೆಲಿಕಾಪ್ಟರ್ ಮಾರ್ಚ್ 27ರಂದು ಕೊಚ್ಚಿಯಲ್ಲಿ ಅಪಘಾತಕ್ಕೀಡಾಗಿದ್ದು ಅದರ ಭಯಾನಕ ವಿಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್ ಪ್ರಾಣ ಹಾನಿಯಾಗಿಲ್ಲ. ಕೊಚ್ಚಿನ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನಲ್ಲಿ (ಸಿಐಎಎಲ್) ಒಬ್ಬರು ಗಾಯಗೊಂಡಿದ್ದಾರೆ.
ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಭಾರತ-ನಿರ್ಮಿತ ಧ್ರುವ ALH Mk III ಚಾಪರ್ ಆಗಿದೆ. ಅದರ ಎನ್‌ಕ್ಲೇವ್‌ನಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಈ ಘಟನೆ ಸಂಭವಿಸಿದೆ, ಆದರೆ ಪೈಲಟ್ ಸಮಯ ಪ್ರಜ್ಞೆಯಿಂದ ವಿಮಾನದಲ್ಲಿದ್ದ ಮೂವರ ಜೀವ ಉಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಇದೀಗ ಕೊಚ್ಚಿಯಲ್ಲಿ ಅಪಘಾತ ಸಂಭವಿಸಿದ ಕ್ಷಣಗಳನ್ನು ಬಹಿರಂಗಪಡಿಸುವ ಹೊಸ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ವೀಡಿಯೋದಲ್ಲಿ ನೋಡಿದಂತೆ, ಕೋಸ್ಟ್ ಗಾರ್ಡ್ ಎಚ್‌ಎಎಲ್ ತಯಾರಿಸಿದ ಹೆಲಿಕಾಪ್ಟರ್ನಲ್ಲಿ ಎಎಲ್‌ಹೆಚ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ನೆಲದಲ್ಲಿ ಅಪ್ಪಳಿಸುವುದನ್ನು ನೋಡಬಹುದು. ಹೆಲಿಕಾಪ್ಟರ್ ನೆಲದಿಂದ ಸುಮಾರು 30-40 ಅಡಿ ಎತ್ತರದಲ್ಲಿದ್ದಾಗ ನಿಯಂತ್ರಣ ಕಳೆದುಕೊಂಡಿದೆ.
https://twitter.com/DefenceDecode/status/1640017604256440321?ref_src=twsrc%5Etfw%7Ctwcamp%5Etweetembed%7Ctwterm%5E1640017604256440321%7Ctwgr%5E0e3428719ee5a43fb877d1ddc346a2d4c62048c1%7Ctwcon%5Es1_&ref_url=https%3A%2F%2Fzeenews.india.com%2Faviation%2Fwatch-scary-video-shows-final-moments-before-coast-guards-helicopter-crashed-in-kochi-2588361.html