Watch: ಟಿಕೆಟ್‌ ಬದಲು ರೋಟಿಯೊಂದಿಗೆ ಬಂದ ಪ್ರೇಕ್ಷಕರು….! ಇದರ ಹಿಂದಿದೆ ಒಂದು ಮಹತ್ವದ ಕಾರಣ

ಏಪ್ರಿಲ್ 17 ರಂದು ಕೀರ್ತಿದನ್ ಗಧ್ವಿ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುಜರಾತ್‌ನ ಪಟಾನ್ ಜಿಲ್ಲೆಯ ನಿವಾಸಿಗಳು ಟಿಕೆಟ್‌ ಪಡೆಯುವ ಬದಲು ರೋಟಿಗಳೊಂದಿಗೆ ಆಗಮಿಸಿದ ಘಟನೆ ನಡೆದಿದೆ.

ಕಾರ್ಯಕ್ರಮದ ಸಂಘಟಕರು ಹಸಿದ ಜಾನುವಾರುಗಳಿಗೆ ಆಹಾರ ನೀಡುವ ವಿಶಿಷ್ಟ ಉಪಕ್ರಮವನ್ನು ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಲು ರೋಟಿಯೊಂದಿಗೆ ಬರಲು ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಅನನ್ಯ ಮತ್ತು ಹೃದಯಸ್ಪರ್ಶಿ ರೀತಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.

ಗಾಯಕ ಪ್ರದರ್ಶನ ಮಾಡುವಾಗ ವೇದಿಕೆಯಲ್ಲಿ ಚಪಾತಿ, ರೋಟಿ ರಾಶಿಯನ್ನು ವಿಡಿಯೋದಲ್ಲಿ ನೋಡಬಹುದು. ಇದು ನೆಟ್ಟಿಗರ ಮನಸ್ಸು ಗೆದ್ದಿದೆ. ಈ ರೀತಿ ಕಾರ್ಯಕ್ರಮ ಹೆಚ್ಚೆಚ್ಚು ನಡೆಯುವ ಅಗತ್ಯ ಇದೆ ಎನ್ನುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read