ಗುಟ್ಕಾ ಪ್ಯಾಕೆಟ್‌ನಲ್ಲಿತ್ತು ಲಕ್ಷಾಂತರ ರೂಪಾಯಿ: ಕಸ್ಟಮ್ಸ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಖದೀಮ

ಕೋಲ್ಕತಾ: ಬ್ಯಾಂಕಾಕ್‌ಗೆ ಹೋಗುವ ವಿಮಾನವನ್ನು ಹತ್ತಬೇಕಿದ್ದ ವ್ಯಕ್ತಿಯನ್ನು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತನ ಗುಟ್ಕಾ ಪ್ಯಾಕೆಟ್‌ಗಳಲ್ಲಿ ಇದ್ದ USD 40,000 (ಸುಮಾರು 33 ಲಕ್ಷ ರೂಪಾಯಿ) ವಶಪಡಿಸಿಕೊಳ್ಳಲಾಗಿದೆ.

ಟ್ವಿಟರ್‌ನಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಕೋಲ್ಕತಾ ಕಸ್ಟಮ್ಸ್ ಇಲಾಖೆ ಈ ವಿಷಯ ತಿಳಿಸಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನ ಚೆಕ್-ಇನ್ ಬ್ಯಾಗೇಜ್‌ನ ಭದ್ರತಾ ತಪಾಸಣೆಯ ನಂತರ ಬಂಧಿಸಲಾಯಿತು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜನವರಿ 5 ರಂದು ಮುಂಬೈನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸುಮಾರು 2,000 ಅಘೋಷಿತ ಸಿಗರೇಟ್ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದರು. ಲಂಡನ್‌ಗೆ ರಫ್ತು ಮಾಡಲು ಹೊರಟಿದ್ದ ಈ ಪೆಟ್ಟಿಗೆಗಳು ಸುಮಾರು 4 ಲಕ್ಷ ಸಿಗರೇಟ್ ತುಂಡುಗಳನ್ನು ಹೊಂದಿದ್ದವು ಮತ್ತು ಸುಮಾರು USD 30,000 ಮೌಲ್ಯದ್ದಾಗಿದ್ದವು.

ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ಈ ತಿಂಗಳ ಆರಂಭದಲ್ಲಿ ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಅಧಿಕಾರಿಗಳು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 4.47 ಕೆಜಿ ಹೆರಾಯಿನ್ ಮತ್ತು 1.596 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read