ಚಲಿಸುತ್ತಿದ್ದ ಬಸ್ ನಲ್ಲಿ ಪ್ರಯಾಣಿಕನ ಮೇಲೆ ಕಳ್ಳರ ಗುಂಪಿನಿಂದ ಹಲ್ಲೆ; ಬಸ್ ನಿಂದ ಹೊರಕ್ಕೆ ನೂಕಿ ಅಟ್ಟಹಾಸ

ಚಲಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕನೊಬ್ಬನ ಮೇಲೆ ಜೇಬುಗಳ್ಳರ ಗುಂಪೊಂದು ಹಲ್ಲೆ ನಡೆಸಿದ್ದು, ಆತನನ್ನು ಅಮಾನುಷವಾಗಿ ಥಳಿಸಿ ಬಲವಂತವಾಗಿ ಬಸ್ ನಿಂದ ಹೊರಹಾಕಿರೋ ಘಟನೆ ದೆಹಲಿಯಲ್ಲಿ ನಡೆದಿದೆ.

ಇತ್ತೀಚೆಗೆ ನಡೆದ ಈ ಘಟನೆಯನ್ನ ಬಸ್ಸಿನೊಳಗಿದ್ದ ಸಿಸಿ ಕ್ಯಾಮೆರಾ ಸೇರಿದಂತೆ ಇತರೆ ಪ್ರಯಾಣಿಕರು ಸೆರೆಹಿಡಿದಿದ್ದಾರೆ. ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ಈ ಭೀಕರ ದಾಳಿಗೆ ಕಾರಣರಾದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಲಾಗಿದೆ.

ಸುಮಾರು ನಾಲ್ಕರಿಂದ ಐವರು ಹುಡುಗರಿದ್ದ ಗುಂಪು ಪ್ರಯಾಣಿಕನನ್ನು ಪದೇ ಪದೇ ಥಳಿಸುವುದು ಮತ್ತು ಬಸ್‌ನ ನೆಲದ ಮೇಲೆ ಬೀಳಿಸುವ ದೃಶ್ಯ ಬೆಚ್ಚಿ ಬೀಳಿಸಿದೆ.

ಪ್ರಯಾಣಿಕನ ಜಾಕೆಟ್, ತಲೆಗೂದಲನ್ನು ಎಳೆಯುವುದು, ಕಪಾಳಮೋಕ್ಷ ಮಾಡುವುದು ಮತ್ತು ಜೋರಾಗಿ ಒದೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಇದು ಇತರ ಪ್ರಯಾಣಿಕರಿಗೆ ಆಘಾತ ಮತ್ತು ಭಯವನ್ನುಂಟುಮಾಡಿತು. ನಂತರ ಪ್ರಯಾಣಿಕನನ್ನು ಬಲವಂತವಾಗಿ ಬಸ್‌ನಿಂದ ಹೊರಗೆ ತಳ್ಳಿ ಕಳ್ಳರ ಗುಂಪು ಎಳೆದುಕೊಂಡು ಹೋಯಿತು.

ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು , ನಗರದ ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಂಡಿದ್ದು ಸಂಬಂಧಿಸಿದ ಅಧಿಕಾರಿಗಳನ್ನು ಸಾರ್ವಜನಿಕರು ಟ್ಯಾಗ್ ಮಾಡಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಕ್ಕೆ ಒತ್ತಾಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read