Shocking Video: ಹಾವಿನೊಂದಿಗೆ ಮಗುವಿನ ಆಟ; ವಿಡಿಯೋ ಮಾಡುತ್ತಾ ಕುಳಿತ ಪೋಷಕರು…!

ಹಾವುಗಳನ್ನು ಸಾಮಾನ್ಯವಾಗಿ ಅತ್ಯಂತ ಅಪಾಯಕಾರಿ ಮತ್ತು ಆಕ್ರಮಣಕಾರಿ ಸರೀಸೃಪಗಳೆಂದು ಪರಿಗಣಿಸಲಾಗುತ್ತದೆ. ಅವುಗಳ ವಿಷದಿಂದಲೇ ಸಾವಿಗೆ ಕಾರಣವಾಗಬಹುದು. ಹಾವುಗಳನ್ನು ಹಿಡಿಯುವ, ಹಿಡಿದುಕೊಂಡ ಅನೇಕ ವೈರಲ್ ವೀಡಿಯೊಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತದೆ. ಇತ್ತೀಚೆಗೆ ಮಗುವೊಂದು ಹಾವಿನೊಂದಿಗೆ ಆಟವಾಡುವ ವೀಡಿಯೊ ನೆಟ್ಟಿಗರಲ್ಲಿ ಬೆರಗು ಮೂಡಿಸಿದೆ.

ಈ ವೈರಲ್ ಆದ ವಿಡಿಯೋದಲ್ಲಿ ಮಗುವೊಂದು ನಿರ್ಭಯವಾಗಿ ಹಾವನ್ನು ಬಾಲದಿಂದ ಹಿಡಿದು ತನ್ನ ಮನೆಯೊಳಗೆ ತಂದಿದೆ. ಈ ಸಂದರ್ಭ ಕುಟುಂಬ ಸದಸ್ಯರು ಪೂಜೆಯಲ್ಲಿ ಭಾಗಿಯಾಗಿದ್ದ ಕೋಣೆಯೊಳಗೆ ಮಗು ಯಾವುದೇ ಭಯವಿಲ್ಲದೆ ಆತ್ಮವಿಶ್ವಾಸದಿಂದ ಹಾವನ್ನು ಹಗ್ಗದಂತೆ ಎಳೆದುಕೊಂಡು ಬಂದಿದೆ. ಮಗುವಿನ ಈ ಕೃತ್ಯ ಕಂಡು ಮನೆಯೊಳಗಿದ್ದವರು ಭಯದಿಂದ ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿಸುವ ದೃಶ್ಯ ಸೆರೆಯಾಗಿದೆ. ಇಷ್ಟೆಲ್ಲಾ ಆದ್ರು ಮಗು ಹೆದರುವುದಿಲ್ಲ. ಅದೃಷ್ಟವಶಾತ್ ಹಾವು ದಾಳಿ ಮಾಡುವುದನ್ನು ತಡೆದಿದ್ದರಿಂದ ಯಾರಿಗೂ ಹಾನಿಯಾಗಿಲ್ಲ.

ಈ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಅದನ್ನು ಖುಷಿಯಿಂದಲೇ ಕಂಡರೆ, ಇತರರು ವೀಡಿಯೊ ಶೂಟ್ ಮಾಡಿದ ವ್ಯಕ್ತಿ ಮಗುವಿಗೆ ಇಂತಹ ಅಪಾಯಕಾರಿ ಕೃತ್ಯದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ವ್ಯಕ್ತಿಯೊಬ್ಬರು ಕಳವಳ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಓ ಮೈ ಗಾಡ್ ಇದು ಎಲ್ಲರಿಗೂ ತುಂಬಾ ಅಪಾಯಕಾರಿ ಎಂದು ಬರೆದಿದ್ದಾರೆ. ಈ ವೀಡಿಯೊ ವೇಗವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಂನಲ್ಲಿ 6.5 ಲಕ್ಷ ವ್ಯೂವ್ಸ್ ಆಗಿದೆ. ಈ ರೀತಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ ಕೆಲವರು ನೋಡಿ ಖುಷಿ ಪಟ್ಟರೆ, ಇತರರು ಸುರಕ್ಷತೆಯ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read