ಮಗಳ ತಲೆ ಮೇಲೆ ಸಿಸಿ ಕ್ಯಾಮೆರಾ ಅಳವಡಿಸಿದ ತಂದೆ; ಪಾಕಿಸ್ತಾನದ ‘ವಿಡಿಯೋ ವೈರಲ್’

ಪಾಕಿಸ್ತಾನದ ತಂದೆಯೊಬ್ಬರು ಮಗಳ ಚಲನವಲನದ ಮೇಲೆ ನಿಗಾ ಇಡಲು ಆಕೆಯ ತಲೆಯ ಮೇಲೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಇಂತಹ ವಿಲಕ್ಷಣ ಸುರಕ್ಷತಾ ಕ್ರಮ ವೈರಲ್ ಆಗಿದೆ.

ಇಂತಹ ಅಸಾಂಪ್ರದಾಯಿಕ ಮತ್ತು ಎಂದಿಗೂ ಕೇಳಿರದ ವಿಧಾನದ ಮೂಲಕ ತನ್ನ ಮಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು lxoz ಮುಂದಾದ ಕ್ರಮದಿಂದಾಗಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೋದಲ್ಲಿ ಮಗಳ ತಲೆಯ ಮೇಲೆ ದೊಡ್ಡ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ತನ್ನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಚಲನವಲನಗಳ ಮೇಲೆ ನಿಗಾ ಇಡಲು ತನ್ನ ತಂದೆ ಕ್ಯಾಮೆರಾ ಅಳವಡಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಯುವತಿ ವಿವರಿಸಿದ್ದಾಳೆ. ಈ ವಿಚಾರಕ್ಕೆ ತಮಗೇನಾದರೂ ಆಕ್ಷೇಪವಿದೆಯೇ ಎಂದು ಕೇಳಿದಾಗ, ಆಕೆ ತನಗೆ ಯಾವುದೇ ಆಕ್ಷೇಪವಿಲ್ಲ ಎಂದು ಉತ್ತರಿಸಿದ್ದಾಳೆ.

ತನ್ನ ತಂದೆಯನ್ನು ತನ್ನ ವೈಯಕ್ತಿಕ “ಸೆಕ್ಯುರಿಟಿ ಗಾರ್ಡ್” ಎಂದು ಕರೆದ ಆಕೆ ಸಿಸಿ ಕ್ಯಾಮೆರಾದಿಂದಾಗಿ ತನ್ನನ್ನು ಎಲ್ಲಾ ಸಮಯದಲ್ಲೂ ತಂದೆ ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದಳು.

ಕರಾಚಿಯಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ, ಮಹಿಳೆಯರ ಕೊಲೆಗಳು ಜರುಗುತ್ತಿದ್ದು ಈ ಕಾರಣಕ್ಕಾಗಿಯೇ ಆಕೆಯ ಪೋಷಕರು ತನ್ನನ್ನು ರಕ್ಷಿಸಲು ಈ ವಿನೂತನ ಉಪಾಯವನ್ನು ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read