ಹವಾಮಾನ ವೈಪರೀತ್ಯದ ಮಧ್ಯೆ ಗಡಿ ಕಾಯುವ ಯೋಧ: ವಿಡಿಯೋ ವೈರಲ್​

ನಮ್ಮ ಗಡಿಯನ್ನು ರಕ್ಷಿಸಲು ಭಾರತೀಯ ಸೈನಿಕರು ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾರೆ ಎನ್ನುವುದು ಬರಿಯ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರಾಣವನ್ನು ಪಣಕ್ಕಿಟ್ಟು ವಿಪರೀತ ಹವಾಮಾನವನ್ನು ಎದುರಿಸುವುದು ಮಾಮೂಲಾಗಿದೆ.

ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ವೀರ ಭಾರತೀಯ ಸೈನಿಕರೊಬ್ಬರು ನಮ್ಮ ಗಡಿಯನ್ನು ರಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಎಸ್‌ಎಫ್ ಕಾಶ್ಮೀರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಕಾಶ್ಮೀರ ಗಡಿ, ಗಡಿ ಭದ್ರತಾ ಪಡೆ ಜವಾನ್, ಗಡಿಯನ್ನು ರಕ್ಷಿಸಲು ತನ್ನ ಆಫೀಸ್ ರೈಫಲ್‌ನೊಂದಿಗೆ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆಯುತ್ತಿದ್ದಾಗ ಹಿಮಪಾತವನ್ನು ಎದುರಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಹಿಮದಿಂದ ಆವೃತವಾದ ಪರ್ವತಗಳು ಮತ್ತು ಸೈನಿಕನು ಅಂತಹ ಹವಾಮಾನ ವೈಪರೀತ್ಯವನ್ನು ಎದುರಿಸುತ್ತಿರುವುದನ್ನು ತೋರಿಸುವ ವೀಡಿಯೊ ನೆಟ್ಟಿಗರು ‘ಜೈ ಹಿಂದ್’ ಎನ್ನುವಂತೆ ಮಾಡಿದೆ.

ಬಿಎಸ್‌ಎಫ್ ಕಾಶ್ಮೀರ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಗೆಲುವಿನ ಸಾಗರವು ಸವಾಲುಗಳಿಂದ ತುಂಬಿದೆ. ಆದರೆ, ಆ ವಿಜಯವನ್ನು ಪಡೆಯುವ ಉತ್ಸಾಹ ಪ್ರತಿಯೊಬ್ಬರಿಗೂ ಇದೆ ಎಂದಿದ್ದಾರೆ.

https://twitter.com/BSF_Kashmir/status/1638766417070764033?ref_src=twsrc%5Etfw%7Ctwcamp%5Etweetembed%7Ctwterm%5E16387664170

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read