ಪೈಪ್​ ಹಿಡಿದು ತಾನೇ ಸ್ನಾನ ಮಾಡುವ ಆನೆ: ಕ್ಯೂಟ್​ ವಿಡಿಯೋ ವೈರಲ್​

ಥಾಯ್ಲೆಂಡ್‌ನಿಂದ ಆನೆಯೊಂದು ಕಬ್ಬಿನ ಟ್ರಕ್​ಗಳನ್ನು ನಿಲ್ಲಿಸಿ ಕಬ್ಬನ್ನು ತಿಂದು ನಂತರ ಟ್ರ್ಯಾಕ್ಟರ್​ ಅನ್ನು ಮುಂದಕ್ಕೆ ಬಿಡುವ ವಿಡಿಯೋ ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಅದೇ ರೀತಿ ಇದೀಗ ಮತ್ತೊಂದು ವೀಡಿಯೊ ವೈರಲ್ ಆಗಿದೆ.

ಇದರಲ್ಲಿ ಆನೆ ಸ್ನಾನ ಮಾಡುವುದನ್ನು ನೋಡಬಹುದು. ಹಳ್ಳ, ಕೊಳ್ಳಗಳಲ್ಲಿ ಆನೆ ಸ್ನಾನ ಮಾಡುವುದನ್ನು ನೀವು ಸಾಮಾನ್ಯವಾಗಿ ನೋಡಿರಬಹುದು. ಅಥವಾ ಬೇರೆ ಯಾರಾದರೂ ಇದಕ್ಕೆ ಪೈಪ್​ಮೂಲಕ ಸ್ನಾನ ಮಾಡಿಸುವುದನ್ನೂ ನೋಡಿರಬಹುದು. ಆದರೆ ಇದು ಬಹಳ ವಿಭಿನ್ನ ಮನಮೋಹನ ಸ್ನಾನವಾಗಿದೆ.

ಏಕೆಂದರೆ ಈ ವೀಡಿಯೋದಲ್ಲಿ, ಆನೆಯು ನೀರಿನ ಪೈಪ್ ಅನ್ನು ಹಿಡಿದು ಸ್ನಾನ ಮಾಡುವುದನ್ನು ನೋಡಬಹುದು. ತನ್ನ ಸೊಂಡಿಲಿನಿಂದ ಪೈಪ್​ ಹಿಡಿದು ಮನುಷ್ಯರ ಸಹಾಯವಿಲ್ಲದೆ, ತನ್ನ ದೇಹದ ಎಲ್ಲಾ ಭಾಗಗಳಿಗೆ ನೀರನ್ನು ಸಿಂಪಡಿಸಿಕೊಂಡು ಸ್ನಾನ ಮಾಡಿದೆ. ಇದನ್ನು ನೋಡಿ ಸೋ ಕ್ಯೂಟ್​ ಎನ್ನುತ್ತಿದ್ದಾರೆ ನೆಟ್ಟಿಗರು. ಈ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಶಾಂತ್​ ನಂದಾ ಅವರು ಟ್ವೀಟ್ ಮಾಡಿದ್ದಾರೆ.

https://twitter.com/susantananda3/status/1634432843559452673?ref_src=twsrc%5Etfw%7Ctwcamp%5Etweetembed%7Ctwterm%5E1634432843559452673%7Ctwgr%5E5cbe4022773d0b97116be3a43b833fb6bebc621a%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-not-sugarcane-truck-video-elephant-doing-this-is-the-cutest-thing-on-internet-today

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read