ಮರಿ ಜಿರಾಫೆಯ ಬೇಟೆಗೆ ಬಂದ ಸಿಂಹ: ಓಡಿ ಬಂದು ಹಿಮ್ಮೆಟ್ಟಿಸಿದ ಅಮ್ಮ

ತಾಯಿ ಜಿರಾಫೆ ಮತ್ತು ಸಿಂಹ ನಡುವಿನ ಕಾದಾಟ ತೋರಿಸುವ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ನಲ್ಲಿ ಕಾಣಿಸಿಕೊಂಡಿದೆ. ಸಿಂಹಿಣಿ ಮರಿ ಜಿರಾಫೆಯ ಕಡೆಗೆ ವೇಗದಲ್ಲಿ ಓಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅದರ ಕುತ್ತಿಗೆಯನ್ನು ಸಿಂಹ ಕಚ್ಚಿ ಹಿಡಿಯುವಷ್ಟರಲ್ಲಿ ಅಮ್ಮ ಎಲ್ಲಿಂದಲೋ ಓಡಿ ಬಂದು ಸಿಂಹವನ್ನು ಓಡಿಸುವ ವಿಡಿಯೋ ಇದಾಗಿದೆ.

ಸಿಂಹವು ಮರಿ ಜಿರಾಫೆಯ ಕುತ್ತಿಗೆಯನ್ನು ಕಚ್ಚುತ್ತಿದ್ದಂತೆಯೇ ತಾಯಿ ಓಡಿ ಬರುತ್ತದೆ. ಸಿಂಹಕ್ಕೆ ಹೋಲಿಸಿದರೆ ಜಿರಾಫೆ ಬಲು ದುರ್ಬಲ. ಆದರೂ ಸಿಂಹವನ್ನು ಅದು ಓಡಿಸುತ್ತದೆ.

ಸಿಂಹ ಓಡಿಹೋಗುತ್ತದೆ. ತಾಯಿ ಜಿರಾಫೆ ಮರಿಯ ಬಳಿ ಬರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಮುಂದಿನ ವಿಡಿಯೋ ಶೇರ್​ ಆಗಲಿಲ್ಲ. ಮರಿ ಜಿರಾಫೆಯ ಕುತ್ತಿಗೆಯನ್ನು ಸಿಂಹ ಇದಾಗಲೇ ಬಲವಾಗಿ ಕಚ್ಚಿದ್ದರಿಂದ ಅದು ಬದುಕಿರುವುದು ಕಷ್ಟ ಎಂದೇ ನೆಟ್ಟಿಗರು ಊಹಿಸಿರುತ್ತಾರೆ. ಇಂಥ ನೋವಿನ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ ಎಂದು ಕೆಲವರು ಬರೆದಿದ್ದರೆ, ಸಿಂಹವನ್ನು ಕೆಲವರು ಶಪಿಸಿದ್ದಾರೆ. ಆದರೆ ಇದು ಪ್ರಕೃತಿಯ ಒಂದು ಭಾಗ. ಇದರಲ್ಲಿ ಯಾವ ಪ್ರಾಣಿಗಳ ತಪ್ಪೂ ಇಲ್ಲ ಎಂದು ಕೆಲವರು ಪ್ರತಿಪಾದಿಸಿದ್ದಾರೆ.

https://www.youtube.com/watch?v=uiFxro-IsCk

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read