ಕಾರ್ ಬಾನೆಟ್‌ ನಲ್ಲಿ ಕಂಡುಬಂತು 9 ಅಡಿ‌ ಉದ್ದದ ನಾಗರ ಹಾವು: ಬೆಚ್ಚಿಬಿದ್ದ ಜನ

ಗ್ರಹದಲ್ಲಿನ ಅತ್ಯಂತ ಅಪಾಯಕಾರಿ ಮತ್ತು ಭಯಾನಕ ಸರೀಸೃಪಗಳಲ್ಲಿ ಹಾವುಗಳೂ ಒಂದು. ಅದರಲ್ಲಿಯೂ ನಾಗರಹಾವು ಎಂಬ ಹೆಸರು ಕೇಳಿದರೇನೇ ಭಯಬೀಳುವವರೇ ಬಹುತೇಕ ಮಂದಿ. ಇಂಥ ಹಾವು ವಾಹನಗಳಲ್ಲಿ, ಮನೆಗಳ ಒಳಗೆ, ಕಿಚನ್​ಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಬಂದು ಕುಳಿತುಕೊಂಡು ಬೆಚ್ಚಿಬೀಳಿಸಿರುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ.

ಅಂಥದ್ದೇ ಇನ್ನೊಂದು ಘಟನೆ ಇಲ್ಲಿದೆ. ಫೆಬ್ರವರಿ 5 ರಂದು ಥೈಲ್ಯಾಂಡ್‌ನ ಸಾಂಗ್‌ಖ್ಲಾ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಸುಮಾರು ಒಂಬತ್ತು ಅಡಿಯ ನಾಗರ ಹಾವು ಕಾರಿನ ಅಡಿಯಲ್ಲಿ ಬಂದು ಕುಳಿತಿದೆ. ಇದನ್ನು ನೋಡಿ ಮಾಲೀಕ ಬೆಚ್ಚಿಬಿದ್ದಿದ್ದಾನೆ.

ಕೆಲವು ನಿಮಿಷಗಳ ನಂತರ, ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಾಗರಹಾವನ್ನು ಹೊರತೆಗೆಯಲು ಪ್ರಯತ್ನಿಸಿದರು. ಅವರು ಅದನ್ನು ಸುರಕ್ಷಿತವಾಗಿ ಎಂಜಿನ್‌ನಿಂದ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿಲು ಹೆಚ್ಚಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಹಾವು ಮಲಗಲು ತಂಪಾದ ಸ್ಥಳವನ್ನು ಹುಡುಕುತ್ತಿರುತ್ತವೆ. ಅಂಥ ಸಂದರ್ಭಗಳಲ್ಲಿ ಈ ಘಟನೆ ನಡೆಯುತ್ತದೆ ಎಂದು ಹಾವು ರಕ್ಷಕ ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read