
ಕೆಲವರು ಹೆಚ್ಚು ಹೆಚ್ಚು ಲೈಕ್ಸ್ ಪಡೆಯುವುದಕ್ಕೋ ಇಲ್ಲವೇ ಹುಚ್ಚುತನದಿಂದ ಅಪಾಯಕಾರಿ ಎನ್ನುವ ಸನ್ನಿವೇಶದಲ್ಲಿ ಸಿಲುಕುವುದು ಉಂಟು. ಅಂಥ ಒಂದು ಭಯಾನಕ ವಿಡಿಯೋ ವೈರಲ್ ಆಗಿದೆ.
ಸಿಂಹದ ಜೊತೆ ಆಟವಾಡಲು ಹೋಗುವುದು ಅಥವಾ ಕುಚೇಷ್ಠೆ ಮಾಡುವುದು ಎಂದರೆ ಸುಮ್ಮನೆಯೇ? ಇದನ್ನು ತಿಳಿದೂ ತಿಳಿದೂ ವ್ಯಕ್ತಿಯೊಬ್ಬ ಸಾಹಸ ಮಾಡಲು ಹೋಗಿ ಪಡಬಾರದ ಕಷ್ಟ ಪಟ್ಟಿದ್ದು, ಜೀವ ಒಂದನ್ನು ಉಳಿಸಿಕೊಂಡಿದ್ದಾನಷ್ಟೇ. ಈ ಭಯಾನಕ ವಿಡಿಯೋ ನೋಡಿ ಜನರು ಈ ವ್ಯಕ್ತಿಯ ಹುಚ್ಚಾಟಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಡಿಯೊವನ್ನು ಫೆಬ್ರವರಿ 19 ರಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಿಂಹವನ್ನು ಇಟ್ಟಿರುವ ಪಂಜರದದ ಒಳಗೆ ಕೈಹಾಕಿದ್ದಾನೆ. ಆಗ ಸಿಂಹ ಪಕ್ಕನೆ ಕೈಯನ್ನು ಹಿಡಿದುಕೊಂಡಿದೆ. ವ್ಯಕ್ತಿ ಎಷ್ಟು ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗದ್ದನ್ನು ವಿಡಿಯೋದಲ್ಲಿ ನೋಡಬಹುದು.
ಇಲ್ಲಿಗೆ ವಿಡಿಯೋ ಕಟ್ ಆಗಿದೆ. ಆದರೆ ನಂತರ ಈ ವ್ಯಕ್ತಿಯ ಬೆರಳುಗಳು ಸಂಪೂರ್ಣ ಕಟ್ ಆಗಿರುವುದಾಗಿ ಹೇಳಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 66 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
https://youtu.be/23puIJxsxYA

 
		 
		 
		 
		 Loading ...
 Loading ... 
		 
		 
		